

ಮಂಜುನಾಥ ಎಸ್. ಅಂಗಡಿ ಧಾರವಾಡ
ವಿದ್ಯಾಕಾಶಿ ಎಂದು ಹೆಸರುವಾಸಿಯಾಗಿರುವ ಧಾರವಾಡಕ್ಕೆ ಓದಲು ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಬರುತ್ತಾರೆ. ಶಿಕ್ಷಣಕ್ಕೆ ಪೂರಕವಾದ ಹಲವಾರು ಪ್ರತಿಷ್ಠಿತ ಶಾಲೆ- ಕಾಲೇಜುಗಳು ಇಲ್ಲಿವೆ. ಆದರೆ, ವಿದ್ಯಾರ್ಥಿನಿಯರಿಗೆಂದೇ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದುಸ್ಥಿತಿ ಕೇಳೋರಿಲ್ಲ. ಸದ್ಯ ಮಳೆ ಸುರಿಯುತ್ತಿದ್ದು, ಸೋರುವ ಮುರುಕಲು ಕಟ್ಟಡದಲ್ಲೇ ಮಕ್ಕಳ ಪಾಠಾಭ್ಯಾಸ ಮುಂದುವರಿದಿದೆ.
ಕಾಲೇಜು ಶಿಕ್ಷಣ ಇಲಾಖೆ ಅಡಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಆರ್.ಎನ್. ಶೆಟ್ಟಿ ಕ್ರೀಡಾಂಗಣ ಎದುರಿನ ಈ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್.ಸಿ, ಫ್ಯಾಷನ್ ಟೆಕ್ನಾಲಜಿ ಪದವಿಗಳಿವೆ. ಕಾಲೇಜು ಶಿಕ್ಷಣ ಇಲಾಖೆಯ ನಿರ್ಲಕ್ಷ÷್ಯದಿಂದ ಕಟ್ಟಡ ಅಕ್ಷರಶಃ ಭೂತಬಂಗಲೆಯAತಾಗಿದೆ.
ಸರ್ಕಾರಿ ಪದವಿ ಕಾಲೇಜು ಮೂಲದಲ್ಲಿ ನಗರದ ಗಾಂಧಿ ಚೌಕ್‌ನಲ್ಲಿ ನಡೆಯುತ್ತಿತ್ತು. ಅದು ಪಾರಂಪರಿಕ ಕಟ್ಟಡವಾಗಿದ್ದರಿಂದ ಕೆಲ ವರ್ಷಗಳ ಹಿಂದೆ ದುರಸ್ತಿ ಕಾರ್ಯ ನಡೆದಿತ್ತು. ಹೀಗಾಗಿ ಪದವಿ ಕಾಲೇಜು ಸ್ಥಳಾಂತರಕ್ಕೆ ಮುಂದಾದಾಗ ಸಿಕ್ಕಿದ್ದು ಆರ್.ಎನ್. ಶೆಟ್ಟಿ ಕ್ರೀಡಾಂಗಣ ಆವರಣದ ಹಳೆಯ ಆದರ್ಶ ವಿದ್ಯಾಲಯದ ಹೆಂಚಿನ ಕಟ್ಟಡ.
ಒಂದು ಕಾಲೇಜು 4 ಕಡೆ ತರಗತಿ:
ಆದರ್ಶ ವಿದ್ಯಾಲಯದ ಹೊಸ ಕಟ್ಟಡ ನಿರ್ಮಾಣವಾದ ನಂತರ ಮಹಿಳಾ ಕಾಲೇಜು ಇಲ್ಲಿಗೆ ಸ್ಥಳಾಂತರಗೊAಡಿದೆ. ಇದರೊಂದಿಗೆ ಸಾಹಿತ್ಯ ಭವನ, ಗಾಂಽ ಚೌಕ್ ಕಟ್ಟಡ ಮತ್ತು ಡಯಟ್‌ನಲ್ಲೂ ಕೆಲ ವರ್ಗಗಳು ನಡೆಯುತ್ತಿವೆ. ವಿವಿಧ ಪದವಿ ಸೇರಿ ಸದ್ಯ 350 ವಿದ್ಯಾರ್ಥಿನಿಯರಿದ್ದು, 4 ಕಡೆಗಳಲ್ಲಿ ತರಗತಿಗಳು ನಡೆಯುತ್ತಿವೆ. ಬಹುತೇಕ ಮಧ್ಯಮ ವರ್ಗದ ವಿದ್ಯಾರ್ಥಿನಿಯರು ಇಲ್ಲಿ ಓದುತ್ತಿದ್ದಾರೆ.
ಆದರ್ಶ ವಿದ್ಯಾಲಯದ ಹಳೆಯ ಕಟ್ಟಡದ ಹೆಂಚುಗಳು ಅಲ್ಲಲ್ಲಿ ಪಡೆದು ಮಳೆ ನೀರು ಸೋರುತ್ತಿದೆ. ವಿದ್ಯಾರ್ಥಿನಿಯರು ತೊಯ್ದ ಬೆಂಚುಗಳ ಮೇಲೆ ಕುಳಿತುಕೊಳ್ಳಬೇಕು. ಜೋರಾಗಿ ಮಳೆಯಾದಾಗ ವಿದ್ಯಾರ್ಥಿನಿಯರು ಛತ್ರಿ ಹಿಡಿದು ಕುಳಿತುಕೊಳ್ಳಬೇಕಾದ ದುಸ್ಥಿತಿ ಇಲ್ಲಿದೆ.
ತುರ್ತು ಕ್ರಮಕ್ಕೆ ಸಚಿವ ಲಾಡ್ ಸೂಚನೆ:
ಕಳೆದ ವರ್ಷ ಮಳೆಗಾಲದಲ್ಲೂ ಇದೇ ಸ್ಥಿತಿ ಇತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾಲೇಜಿಗೆ ಭೇಟಿ ನೀಡಿದ್ದರು. ತುರ್ತು ಕ್ರಮ ಕೈಗೊಂಡು ದುರಸ್ತಿ ಮಾಡಿ ಮಳೆ ನೀರು ಸೋರಿಕೆ ತಡೆಗಟ್ಟುವಂತೆ ಅಽಕಾರಿಗಳಿಗೆ ಸೂಚಿಸಿದ್ದರು. ಒಂದು ವರ್ಷ ಕಳೆದರೂ ಮತ್ತದೇ ಸ್ಥಿತಿ ಮುಂದುವರಿದಿದೆ.
ಮಹಿಳಾ ಕಾಲೇಜು ತರಗತಿಗಳು ಸಾಹಿತ್ಯ ಭವನ, ಗಾಂಽ ಚೌಕ್ ಕಟ್ಟಡ, ಹಳೇ ಆದರ್ಶ ವಿದ್ಯಾಲಯ ಹಾಗೂ ಡಯಟ್‌ನಲ್ಲಿ ನಡೆಯುತ್ತಿವೆ. ಹಳೇ ಆದರ್ಶ ವಿದ್ಯಾಲಯ ಕಟ್ಟಡ ಸೋರುತ್ತಿದ್ದು, ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
ಡಾ. ಎಸ್.ಎಸ್. ಅಂಗಡಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ