ಕೊಟ್ಟೂರು: ತಾಲೂಕಿನಲ್ಲಿ ಎಡಬಿಡದೆ ಸುರಿದ ಮಳೆಯಿಂದ 29 ಮನೆಗಳಿಗೆ ಹಾನಿಯಾಗಿದೆ ಎಂದು ತಹಸಿಲ್ದಾರ್ ಜಿ.ಕೆ. ಅಮರೇಶ ತಿಳಿಸಿದ್ದಾರೆ.
ತಾಲೂಕಿನಲ್ಲಿ ಮಂಗಾಪುರ, ದಿಬ್ಬದಹಳ್ಳಿ, ಕಂದಗಲ್ಲು, ಗಜಾಪುರ, ಕೋಗಳಿ, ಅಲಬೂರು, ಅಂಬಳಿ, ಗಾಣಗಟ್ಟೆ, ನಿಂಬಳಗೆರೆ, ತೂಲಹಳ್ಳಿ, ನಡುಮಾವಿನಹಳ್ಳಿ, ದೂಪದಹಳ್ಳಿ, ಹರಾಳು ಗ್ರಾಮಗಳ ಮನೆಗಳು ಹಾನಿಗೀಡಾಗಿದ್ದು, ಜಿಪಂ ಇಂಜಿನೀಯರ್ ವರದಿ ಆಧರಿಸಿ ಪರಿಹಾರ ನೀಡಲಾಗುವುದು ಎಂದರು.