

ಹನೂರು: ಸಮೀಪದ ಬೂದುಬಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಮುಸುಕಿನ ಜೋಳದ ಫಸಲು ಹಾನಿಗೀಡಾಗಿದ್ದು, ನಷ್ಟ ಸಂಭವಿಸಿದೆ.
ರಂಗಯ್ಯ ಅವರ 2.36 ಎಕರೆ ಜಮೀನಿನಲ್ಲಿ ಬೆಳೆದಿದ್ದ ಫಸಲು ಬಹುತೇಕ ಕಡೆ ನೆಲಕಚ್ಚಿದೆ. ಕಳೆದ ವರ್ಷವೂ ಮಳೆಗೆ ಬೆಳೆ ಹಾನಿಯಾಗಿತ್ತು. ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಾರಿಯಾದರೂ ಜಮೀನಿಗೆ ಭೇಟಿ ನೀಡಿ, ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ರಂಗಯ್ಯ ಆಗ್ರಹಿಸಿದ್ದಾರೆ.