ಗಾಳಿ ಮಳೆಗೆ ಮನೆಗಳಿಗೆ ಹಾನಿ : ಸ್ಥಳಕ್ಕೆ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

gurme
ಗಾಳಿ ಮಳೆಗೆ ಪೆರ್ಡೂರು ಗ್ರಾಪಂ ವ್ಯಾಪ್ತಿಯ ಹತ್ರಬೈಲು ಗಣಪತಿ ಗೌರಿ ಅವರ ದನದ ಕೊಟ್ಟಿಗೆ, ಬಾಡಾಲಜೆಡ್ಡು ಪವಿತ್ರಾ ಪೂಜಾರಿ ಮನೆಗೆ ಹಾನಿ ಉಂಟಾಗಿದ್ದನ್ನು ಸೋಮವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
Published on

ಹೆಬ್ರಿ: ಗಾಳಿ ಮಳೆಗೆ ಪೆರ್ಡೂರು ಗ್ರಾಪಂ ವ್ಯಾಪ್ತಿಯ ಹತ್ರಬೈಲು ಗಣಪತಿ ಗೌರಿ ಅವರ ದನದ ಕೊಟ್ಟಿಗೆ, ಬಾಡಾಲಜೆಡ್ಡು ಪವಿತ್ರಾ ಪೂಜಾರಿ ಮನೆಗೆ ಹಾನಿ ಉಂಟಾಗಿದ್ದನ್ನು ಸೋಮವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶೀಘ್ರವೇ ಗರಿಷ್ಠ ಪರಿಹಾರ ಮಂಜೂರು ಮಾಡುವಂತೆ ಸಂಬಂದಿಸಿದ ಇಲಾಖಾಧಿಕಾರಿಗಳಿಗೆ ಶಾಸಕ ಗುರ್ಮೆ ಸುರೇಶ ಶೆಟ್ಟಿ ತಿಳಿಸಿದರು. ಪೆರ್ಡೂರು ಗ್ರಾಪಂ ಅಧ್ಯಕ್ಷೆ ಚೇತನಾ ಶೆಟ್ಟಿ, ಉಪಾಧ್ಯಕ್ಷ ದೇವು ಪೂಜಾರಿ, ಗ್ರಾಪಂ ಸದಸ್ಯರಾದ ತುಕಾರಾಮ್ ನಾಯಕ್, ಸಚಿನ್ ಪೂಜಾರಿ, ಜಗದೀಶ್ ಶೆಟ್ಟಿ, ಶಂಕುತಲಾ ಶೆಟ್ಟಿ, ಉಷಾ ನಾಯಕ್, ಉಷಾಲತಾ ಪೂಜಾರಿ, ಪೆರ್ಡೂರು ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಸೆರ್ವೇಗಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net