ಧಾರಾಕಾರ ಮಳೆಯಿಂದ ಮನೆಗಳಿಗೆ ಹಾನಿ

BKL RAIN
Published on

ಭಟ್ಕಳ: ತಾಲೂಕಿನಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿವೆ. ಹಲವು ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಕಾಯ್ಕಿಣಿ ಜನತಾ ಕಾಲನಿಯಲ್ಲಿ ಕುಪ್ಪಯ್ಯ ದೇವಾಡಿಗ ಎಂಬುವವರ ಮನೆ ಕುಸಿದಿದೆ. ಕಿತ್ರೆಯ ಮಾಸ್ತಿ ಗೊಂಡ, ಆಸರಕೇರಿಯ ಶಾರದಾ ಹೊನ್ನಪ್ಪ ನಾಯ್ಕ ಎಂಬುವವರ ಮನೆಯ ಮೇಲ್ಛಾವಣಿ ಕುಸಿದಿದೆ. ಮುಲ್ಲಿಗದ್ದೆ ಹಡೀನ ಮಾದಿ ದುರ್ಗಪ್ಪ ನಾಯ್ಕ ಮನೆ ಭಾಗಶಃ ಕುಸಿದಿದೆ.

ಪ್ರಮುಖ ನದಿಗಳು ಉಕ್ಕಿ ಬಂದ ಕಾರಣ ಪುರವರ್ಗ, ಮೂಡಭಟ್ಕಳ ತಲಾಂದ ಹಾಗೂ ಬಿಳಲಖಂಡ ಪ್ರದೇಶಗಳಲ್ಲಿ ಅಲ್ಲಲ್ಲಿ ಮನೆಯೊಳಗೆ ನೀರು ನುಗ್ಗಿದೆ. ರಂಗಿನಕಟ್ಟೆ ರಾಷ್ಟ್ರಿಯ ಹೆದ್ದಾರಿ ಹಾಗೂ ಶಂಸುದ್ದೀನ್ ಸರ್ಕಲ್ ಕೆರೆಯಂತೆ ಮಾರ್ಪಟ್ಟು ವಾಹನ ಸವಾರರು ಪರದಾಡಿದರು. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net