ಆರೋಗ್ಯ-ಗೌರವ ಹಾಳು

ಕಂಪ್ಲಿಯಲ್ಲಿ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಪಿಐ ಕೆ.ಬಿ.ವಾಸುಕುಮಾರ್, ಪಿಎಸ್‌ಐ ಅವಿನಾಶ್ ಕಾಂಬ್ಳೆ, ಎಎಸ್‌ಐ ಬಸವರಾಜ, ಉಪ ಪ್ರಾಚಾರ್ಯೆ ಸುಜಾತಾ, ಶಿಕ್ಷಕರಾದ ಡಾ.ಬಿ.ಸುನೀಲ್, ಗೌತಮಿ, ಬಂಗಿ ಸರೋಜಾ ಇದ್ದರು.

Published on

ಕಂಪ್ಲಿ: ವಿದ್ಯಾರ್ಥಿ ದೆಸೆಯಲ್ಲಿಯೇ ತಂಬಾಕು, ಮಾದಕ ದ್ರವ್ಯ ಸೇವನೆಯಿಂದ ವಿಮುಖರಾಗಬೇಕು ಎಂದು ಪಿಐ ಕೆ.ಬಿ.ವಾಸುಕುಮಾರ್ ಹೇಳಿದರು. ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯದ ದುಷ್ಪರಿಣಾಮಗಳ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ದುಶ್ಚಟಗಳಿಂದ ಹಣ, ಆರೋಗ್ಯ, ಗೌರವ ಹಾಳಾಗುವುದಲ್ಲದೆ, ಉತ್ತಮ ಅವಕಾಶಗಳಿಂದ ವಂಚಿತರಾಗಬೇಕಾಗುತ್ತದೆ ಎಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಫಲಕ ಹಿಡಿದು ಘೋಷಣೆ ಕೂಗುತ್ತ ಜಾಥಾ ನಡೆಸಿದರು. ಪಿಎಸ್‌ಐ ಅವಿನಾಶ್ ಕಾಂಬ್ಳೆ, ಎಎಸ್‌ಐ ಬಸವರಾಜ, ಉಪ ಪ್ರಾಚಾರ್ಯೆ ಸುಜಾತಾ, ಶಿಕ್ಷಕರಾದ ಡಾ.ಬಿ.ಸುನೀಲ್, ಗೌತಮಿ, ಬಂಗಿ ಸರೋಜಾ, ಮುರುಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net