ಮಳೆಯಿಂದ ವಾಸದ ಮನೆಗೆ ಹಾನಿ

ಮಳೆಯಿಂದ ವಾಸದ ಮನೆಗೆ ಹಾನಿ
Published on

ಅರಕಲಗೂಡು: ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ಇದ್ದಕ್ಕಿದ್ದಂತೆ ಅಬ್ಬರಿಸಿದ ಮಳೆ ಗಾಳಿ ಹೊಡೆತಕ್ಕೆ ಗ್ರಾಮದ ಎಸ್.ಕೆ.ಮಂಜುನಾಥ್ ಎಂಬುವರ ವಾಸದ ಮನೆ ಹೆಂಚುಗಳು ಹಾರಿ ಹೋಗಿವೆ. ಮನೆಯಲ್ಲಿದ್ದ ರಾಗಿ, ಭತ್ತದ ಚೀಲಗಳು ಸೇರಿದಂತೆ ಧವಸ ಧಾನ್ಯಗಳು ಮಳೆಗೆ ಸಿಲುಕಿ ಅಪಾರ ನಷ್ಟ ಉಂಟಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾಳೆ ಬೆಳೆ ನಾಶ: ಭಾರಿ ಗಾಳಿಗೆ ಬಾನುಗೊಂದಿ ಗ್ರಾಮದ ಸುತ್ತಮುತ್ತ ರೈತರು ಬೆಳೆದಿದ್ದ ಬಾಳೆ ಮರಗಳು ಮುರಿದು ಗೊನೆಗಳು ನೆಲಕಚ್ಚಿ ಹಾನಿಗೊಳಗಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net