ಮನೆಗಳ ಗೋಡೆ ಕುಸಿದು ಹಾನಿ

19mnd1--
Published on

ಮುಂಡಗೋಡ: ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ತಾಲೂಕಿನ ವಿವಿಧೆಡೆ ಮನೆಗಳ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿವೆ.

ತಾಲೂಕಿನ ನಂದಿಗಟ್ಟ ಗ್ರಾಮದ ಸರೋಜಾ ಹುಬ್ಬಳ್ಳಿ, ಅಜ್ಜಳ್ಳಿ ಗ್ರಾಮದ ರತ್ನವ್ವ ಸುಭಾಸ ಗಂಟೆಮ್ಮನವರ, ಹುನಗುಂದ ಗ್ರಾಮದ ಕಮಲವ್ವ ತಡಸದ, ಕೊಳಗಿ ಹಾಗೂ ಹರಗನಳ್ಳಿಯಲ್ಲಿ ಮನೆಗಳು ಕುಸಿದು ಬಿದ್ದಿವೆ. ಜನಗೇರಿ ಗ್ರಾಮದಲ್ಲಿ ದನದ ಕೊಟ್ಟಿಗೆ ಕುಸಿದು ಬಿದ್ದು ಹಾನಿ ಸಂಭವಿಸಿವೆ. ಘಟನಾ ಸ್ಥಳಗಳಿಗೆ ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net