ಡ್ಯಾಂ ಹಿನ್ನೀರಿನ ರೈತರಿಗೆ ಸಂಕಷ್ಟ

02ALD05
ತಿಗರಿ ಗ್ರಾಮದಲ್ಲಿನ ನದಿ ಪಾತ್ರದ ಹಿನ್ನೀರ ಪ್ರದೇಶ.
Published on

ಅಳವಂಡಿ: ತುಂಗಭದ್ರಾ ಜಲಾಶಯ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಅಚ್ಚುಕಟ್ಟು ಭಾಗದಲ್ಲಿನ ರೈತರಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ, ಜಲಾಶಯದ ಹಿನ್ನೀರಿನ ಜಮೀನಿನ ರೈತರಲ್ಲಿ ಆತಂಕ ಮೂಡಿಸಿದೆ.

ಜಲಾಶಯದ ನೀರು ಖಾಲಿಯಾದಾಗ ಹಿನ್ನೀರಿನ ಜಮೀನಿನಲ್ಲಿ ಬಿತ್ತನೆ ಕಾರ್ಯ ಮಾಡಲಾಗುತ್ತದೆ. ಪ್ರಸಕ್ತ ವರ್ಷ ತುಂಗಭದ್ರಾ ನದಿ ತಟದಲ್ಲಿರುವ ಗ್ರಾಮಗಳಾದ ಕೇಸಲಾಪುರ, ನಿಲೋಗಿಪುರ, ಹಲವಾಗಲಿ, ತಿಗರಿ, ನೀರಲಗಿ, ಕಾತರಕಿ, ಮತ್ತೂರ, ಹನಕುಂಟಿ ಮುಂತಾದ ಗ್ರಾಮಗಳ ರೈತರು ಆಣೆಕಟ್ಟೆಯ ಹಿನ್ನೀರ ಜಮೀನುಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಉದ್ದು, ಸಜ್ಜೆ, ಸೂರ್ಯಕಾಂತಿ, ಅಲಸಂದಿ, ಮೆಕ್ಕೆಜೋಳ, ಭತ್ತ ಬೆಳೆಗಳನ್ನು ಬೆಳೆದಿದ್ದಾರೆ.

ಬೆಳೆ ಸಮೃದ್ಧವಾಗಿದ್ದು, ಆದರೆ, ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆಯಾಗಿದ್ದರಿಂದ ತುಂಗಭದ್ರಾ ನದಿಗೆ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ಹಿನ್ನೀರಿ ಜಮೀನುಗಳು ಮುಳುಗಡೆಯಾಗುತ್ತಿದ್ದು, ರೈತರು ಬೆಳೆ ನಾಶದ ಭೀತಿ ಎದುರಿಸುತ್ತಿದ್ದಾರೆ.

ಡ್ಯಾಂ ಹಿನ್ನೀರಿನ ಜಮೀನು ಫಲವತ್ತತೆಯಿಂದ ಕೂಡಿದೆ. ಹೀಗಾಗಿ ರೈತರು ಕಡಿಮೆ ಖರ್ಚಿನಲ್ಲಿ ಉತ್ತಮ ಫಲ ಸಿಗುತ್ತದೆ. ರೈತರ ಸಾಮಾನ್ಯ ಅಂದಾಜಿನಂತೆ ಆಗಸ್ಟ್ ತಿಂಗಳಲ್ಲಿ ತುಂಗಭದ್ರಾ ಆಣೆಕಟ್ಟು ಭರ್ತಿಯಾಗುತ್ತೆ. ಆಗ ಹಿನ್ನೀರು ಪ್ರದೇಶ ಸಹ ಜಲಾವೃತವಾಗುತ್ತದೆ.

ಅಷ್ಟರಲ್ಲಿ ರೈತರು ಬೆಳೆಗಳನ್ನು ಕಟಾವು ಮಾಡುವುದುಂಟು. ಹೀಗಾಗಿ ಬೆಳೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ, ಈ ವರ್ಷ ಡ್ಯಾಂ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ ತುಂಗಭದ್ರಾ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಳವಾಗಿದೆ. ಒಂದೆಡೆ ಡ್ಯಾಂ ಭರ್ತಿಯಾಗುತ್ತಿರುವುದರಿಂದ ನೀರಾವರಿ ವ್ಯಾಪ್ತಿಯ ಪ್ರದೇಶದ ರೈತರು ಖುಷಿಗೊಂಡಿದ್ದು. ಇನ್ನೊಂದೆಡೆ ಹಿನ್ನೀರ ಪ್ರದೇಶದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ರೈತ ತಿಗರಿ ಗ್ರಾಮರೈಮಾನಸಾಬ ಬೋಚನಹಳ್ಳಿಪ್ರಸಕ್ತ ವರ್ಷ ತುಂಗಭದ್ರಾ ನದಿಗೆ ಮೇ ತಿಂಗಳಲ್ಲಿಯೇ ನೀರಿನ ಒಳ ಹರಿವು ಅಧಿಕವಾಗಿದೆ. ಇದೇ ತರನಾಗಿ ಒಳಹರಿವು ದಾಖಲಾದರೆ ಅಂದಾಜು 20 ದಿನಗಳಲ್ಲಿ ಬೆಳೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಬೆಳೆ ನಷ್ಟದ ಭೀತಿ ರೈತರನ್ನು ಆವರಿಸಿದೆ. ಕೃಷಿ ಅಧಿಕಾರಿ ಅಳವಂಡಿಪ್ರತಾಪಗೌಡ ನಂದನಗೌಡ್ರನದಿ ಪಾತ್ರದ ಹಿನ್ನೀರ ಪ್ರದೇಶ ಫಲವತ್ತೆತೆಯಿಂದ ಕೂಡಿರುವುದರಿಂದ ಕಡಿಮೆ ಖರ್ಚಿನಲ್ಲಿ ಫಸಲು ಚೆನ್ನಾಗಿ ಬರುತ್ತದೆ. ಪ್ರಸಕ್ತ ವರ್ಷ ತುಂಗಭದ್ರಾ ನದಿಗೆ ಒಳ ಹರಿವಿನ ಪ್ರಮಾಣ ಅಧಿಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net