ದಳವಾಯಿ ಸಂಘ ಸಂಸ್ಥೆಗಳ ಶಕ್ತಿಯಾಗಿದ್ದರು

1sgr2
ಸಾಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ದಳವಾಯಿ ದಾನಪ್ಪನವರ ಶ್ರದ್ಧಾಂಜಲಿ ಸಭೆ ನಡೆಯಿತು. ಗುಂಡಾಲಿ ಬಸವರಾಜ್, ಜ್ಞಾನೇಶ್ವರಪ್ಪ, ಗಿರೀಶ್ ಬೇಸೂರು, ಸದಾನಂದ, ಚನ್ನಬಸಪ್ಪ ಇತರರಿದ್ದರು.
Published on

ಸಾಗರ: ಶರಣ ದಳವಾಯಿ ದಾನಪ್ಪ ವೀರಶೈವ ಸಮಾಜದ ನಿರ್ದೇಶಕರಾಗಿದ್ದು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು ಎಂದು ವೀರಶೈವ ಸಮಾಜದ ಅಧ್ಯಕ್ಷ ಗುಂಡಾಲಿ ಬಸವರಾಜ್ ತಿಳಿಸಿದರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ನಿಧನರಾದ ದಳವಾಯಿ ದಾನಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ದಳವಾಯಿ ದಾನಪ್ಪ ಜೀವವಿಮಾ ನಿಗಮದ ಪ್ರತಿನಿಧಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಎಲ್ಲರ ಜತೆ ಪ್ರೀತಿ ವಿಶ್ವಾಸದಿಂದ ಬೆರೆಯುವುದರ ಜತೆಗೆ ಸಮಾಜದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತ, ಸೂಕ್ತ ಸಲಹೆ ಸಹಕಾರ ನೀಡುತ್ತಿದ್ದರು ಎಂದು ಹೇಳಿದರು. ಸಮಾಜದ ಉಪಾಧ್ಯಕ್ಷ ಕೆ.ಎಚ್.ಜ್ಞಾನೇಶ್ವರಪ್ಪ, ಕಾರ್ಯದರ್ಶಿ ಗಿರೀಶ್ ಬೇಸೂರು, ಸಹ ಕಾರ್ಯದರ್ಶಿ ಸದಾನಂದ, ಪ್ರಮುಖರಾದ ಬಾಣವಾರ ಚನ್ನಬಸಪ್ಪ, ಶಿವಕುಮಾರ್, ಯೋಗೇಶ್, ಗುರುಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net