

ಚಾಮರಾಜನಗರ ಜಿಲ್ಲೆಯ ಜ್ಯೋತಿ ಗೌಡನಪುರದಲ್ಲಿ ಭಗವಾನ್ ಬುದ್ಧರ ವಿಗ್ರಹವನ್ನು ಧ್ವಂಸ ಮಾಡಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ವಿರೂಪಗೊಳಿಸಿ ವಿಕೃತ ಮೆರೆದಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಉಪ ಮೇಯರ್ ವಿ, ಶೈಲೇಂದ್ರ ರವರು ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದಲಿತರ ಗ್ರಾಮಗಳಲ್ಲಿ ಒಂದಲ್ಲ ಒಂದು ರೀತಿ ಶೋಷಣೆ ದಬ್ಬಾಳಿಕೆ ಮಹಿಳೆಯರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು ರಾಜ್ಯದಲ್ಲಿ ದಲಿತರು ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ದಲಿತರ ಆರಾಧ್ಯ ದೈವ ಅಂಬೇಡ್ಕರ್ ರವರ ಪುತ್ತಳಿಗಳನ್ನು ವಿರೂಪ ಗೊಳಿಸುವುದು ಭಾವಚಿತ್ರಗಳನ್ನು ವಿರೂಪ ಗೊಳಿಸುವುದು ರಾಜ್ಯದಲ್ಲಿ ಸರ್ವೇ ಸಾಮಾನ್ಯವಾಗಿದೆ. ಎಂದು ಹೇಳಿದರು
ಹಿಂದೆ ಡಿಜೆ ಹಳ್ಳಿ ಕೆಜೆ ಹಳ್ಳಿ ಹಳ್ಳಿಯಲ್ಲಿ ಮನೆಗಳ ಮೇಲೆ ಅಟ್ಟಹಾಸ ಮೆರೆದಿದ್ದರು ನಂತರ ಮೈಸೂರು ಜಿಲ್ಲೆಯ ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಹರಿದು ಹಾಕಿ ಅಪಮಾನ ಮಾಡಿದರು ಈಗ ಹಿಂದುಳಿದ ಚಾಮರಾಜನಗರ ಜಿಲ್ಲೆಯ ಜ್ಯೋತಿಗೌಡನಪುರ ಗ್ರಾಮದಲ್ಲಿ ಭಗವಾನ್ ಬುದ್ಧರ ಪುತ್ತಳಿಯನ್ನು ವಿರೂಪಗೊಳಿಸಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಕಿಡಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಹೀಗೆ ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನವಾಗುತ್ತಿದ್ದರು ಸಹ ರಾಜ್ಯ ಸರ್ಕಾರದ ದಲಿತ ಸಮಾಜದ ಮುಖಂಡರಾದ ರಾಜ್ಯ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ರವರು ಕೈಕಟ್ಟಿ ಕೂತಿರುವುದನ್ನು ನೋಡಿದರೆ ಅವರ ಅಸಹಾಯಕತೆ ಇದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಮತ್ತೊಬ್ಬ ದಲಿತ ಪ್ರಭಾವಿ ರಾಜ್ಯ ಸರ್ಕಾರದ ಸಚಿವರಾದಂತಹ ಐಟಿಬಿಟಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಇಂತಹ ಕೃತಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ದಲಿತರ ಮೇಲೆ ನಡೆಯುತ್ತಿದ್ದರು ಸಹ ದಲಿತರ ರಕ್ಷಣೆಗೆ ಬಾರದಿರುವುದು ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಚಿಂತನೆಯನ್ನು ಮಾಡದೆ ಕೆಲಸಕ್ಕೆ ಬರದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿರುವ ಸಚಿವರ ನಡೆ ರಾಜ್ಯದ ದಲಿತರ ಬಗ್ಗೆ ಕಿಂ ಚಿತು ಕಾಳಜಿ ಇಲ್ಲದೆ ಕಾಣುತ್ತದೆ ಎಂದು ಅವರು ಕಿಡಿ ಕಾರಿದರು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ನಾನು ಒಬ್ಬ ದಲಿತ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ರಾಜ್ಯದ ದಲಿತರಿಗೆ ತೊಂದರೆಗೊಳಗಾದಾಗ ರಕ್ಷಣೆ ಕೊಡಬೇಕೆಂದು ಅವರು ಆಗ್ರಹಿಸಿದರು ಮುಖ್ಯಮಂತ್ರಿಗಳು ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾಗಿ ಇಂತಹ ಕೃತ್ಯಗಳು ನಡೆಸುವವರ ಮೇಲೆ ಕಡಿವಾಣ ಹಾಕಬೇಕು ಹಾಗೂ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು, ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಹೆಚ್ ಸಿ, ಮಹದೇವಪ್ಪ ರವರು ಹಾಗೂ ಚಾಮರಾಜನಗರ ಜಿಲ್ಲೆಯ ಸಂಸದರಾದ ಸುನಿಲ್ ಬೋಸ್ ರವರು ಮೌನವಾಗಿರುವುದು ಕೆಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟದಂತಾಗಿದೆ ಎಂದು ಅವರು ಹೇಳಿದರು.
ಚಾಮರಾಜನಗರ ಜಿಲ್ಲೆಯ ಜ್ಯೋತಿಗೌಡನಪುರದಲ್ಲಿ ನಡೆದಿರುವ ಭಗವಾನ್ ಬುದ್ಧರ ಹಾಗೂ ಅಂಬೇಡ್ಕರ್ ಅವರ ಪುತ್ತಳಿ ಹಾಗೂ ಭಾವಚಿತ್ರಕ್ಕೆ ಅಪಮಾನ ಮಾಡಿದ ಸಮಾಜಘಾತಕ ಶಕ್ತಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಉಪ ಮೇಯರ್ ವಿ, ಶೈಲೇಂದ್ರ ಆಗ್ರಹಿಸಿದರು.