ದಲಿತರ ಮೇಲೆ ಇಂದಿಗೂ ದೌರ್ಜನ್ಯ

14 HANUR 2
Published on

ಚಾನರಾಜನಗರ : ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸುವುದರ ಮೂಲಕ ನ್ಯಾಯಯುತ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ತಿಳಿಸಿದರು.


ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.


ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಖಂಡನೀಯ. ಅದರಲ್ಲೂ ಹನೂರು ಭಾಗದಲ್ಲಿ ಇಂತಹ ಘಟನೆಗಳು ನಡೆಯತ್ತಲೇ ಇದ್ದು, ಇನ್ನು ಜೀವಂತವಾಗಿರುವುದು ವಿಪರ್ಯಾಸ ಎಂದರು.


ದಸಂಸ ಹಾಸನ ಜಿಲ್ಲಾ ಸಂಚಾಲಕ ಜಗದೀಶ್, ಜಿಲ್ಲಾ ಪ್ರಧಾನ ಸಂಚಾಲಕ ವೀರಣ್ಣ, ಜಿಲ್ಲಾ ಸಂಚಾಲಕರಾದ ಭಾಗ್ಯಮ್ಮ, ನಾಗರಾಜು, ಗಣೇಶ್, ತಾಲೂಕು ಸಂಚಾಲಕರಾದ ಶಿವಸ್ವಾಮಿ, ಮಾದೇಶ್, ಮಂಗಲ ಮಂಟೇಸ್ವಾಮಿ, ಕೆಂಪರಾಜು, ಚಿಕ್ಕತಾಯಮ್ಮ, ಗುಂಡಾಪುರ ಸೋಮಣ್ಣ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net