ದಲಿತರ ನಡೆ, ಬಿಜೆಪಿ ಕಡೆ - ಸಮಾರಂಭವ

04GDG08
Published on

ವಿಜಯವಾಣಿ ಸುದ್ದಿಜಾಲ ಗದಗ
ಶೋಷಿತರು ಸಮುದಾಯ ಮುಖ್ಯವಾಹಿನಿಗೆ ಬರಬೇಕೆಂಬ ಸಂವಿಧಾನ ಶಿಲ್ಪಿ ಡಾ. ಬಿ.ಆರ್​.ಅಂಬೇಡ್ಕರ ಅವರು ಕಂಡ ಕನಸ್ಸು ನನಸು ಮಾಡುವ ಶಕ್ತಿ ಕೇವಲ ಬಿಜೆಪಿಗಿದೆ. ಬಿಜೆಪಿಯಿಂದ ಮಾತ್ರ ರಾಜ್ಯ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿ ಸಾಧ್ಯ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.
ನಗರದ ಡಿಸಿ ಮಿಲ್​ ನಲ್ಲಿ ಸೋಮವಾರ ದಲಿತರ ನಡೆ ಬಿಜೆಪಿ ಕಡೆ ಎಂಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 70 ವರ್ಷಗಳಿಂದ ಶಾಸಕರ ಆಡಳಿತ ವೈಖರಿಯನ್ನು ಗದಗ ಜನತೆ ನೋಡಿದೆ. ಕಳೆದ 10 ದಿನಗಳಿಂದ ಶಾಸಕರು ಕೇವಲ ಭೂಮಿ ಪೂಜೆಯನ್ನೇ ಮಾಡುತ್ತಿದ್ದಾರೆ. ಗದಗ ಜನತೆಗಾಗಿ ಮನುಕುಲಕ್ಕಾಗಿ ಬಿೆಯನ್ನು ಬೇಡಿ ಜನರ ಹೊಟ್ಟೆ ತುಂಬಿಸಿದ ಸಂತೃಪ್ತಿ ನೆಮ್ಮದಿ ನನಗಿರುವುದರಿಂದ 2 ಬಾರಿಗೆ ತಗುಲಿದ ಕೊರೋನಾವನ್ನು ಯಶಸ್ವಿಯಾಗಿ ಎದುರಿಸಿದ್ದೇನೆ. ಈ ಬಾರಿ ನನಗೆ ಆಶೀರ್ವಾದ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿರಿ ಎಂದರು.
ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್​.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮೂಲಕ ಗೌರವಿಸಿದರು. ಬಿಜೆಪಿ ದಲಿತ ಮುಖಂಡರಾದ ಅಶೋಕ ಕುಡತಿನ್ನಿ, ಉಡಚಪ್ಪ ಹಳ್ಳಿಕೇರಿ ಸಾಂದಭಿರ್ಕವಾಗಿ ಮಾತನಾಡಿದರು.
ಗದಗ ಬೆಟಗೇರಿ ನಗರಸಭೆಯ ಮಾಜಿ ಅಧ್ಯರು ಹಾಗೂ ಅಖಿಲ ಕರ್ನಾಟಕ ಮೋಚಿಗಾರ ಸಂದ ರಾಜ್ಯಾಧ್ಯರಾದ ಶಿವಪ್ಪ ಮುಳಗುಂದ, ಕಾಂತಿಲಾಲ ಬನ್ಸಾಲಿ, ಸಿದ್ದಣ್ಣ ಪಲ್ಲೇದ, ಎಂ.ಎಂ.ಹಿರೇಮಠ, ಸಂಗಮೇಶ ದುಂದೂರ, ನಗರಸಭೆ ಅಧ್ಯೆ ಉಷಾ ದಾಸರ, ಅನೀಲ ಅಬ್ಬಿಗೇರಿ, ರಾವೇಂದ್ರ ಯಳವತ್ತಿ ಹಲವರು ಇದ್ದರು.

ಬಾಕ್ಸ್​ :
ಕಳೆದ 10 ದಿನಗಳಿಂದ ಕೇವಲ ಭೂಮಿ ಪೂಜೆಯಲ್ಲಿಯೇ ಗದಗ ಶಾಸಕರು ತೊಡಗಿದ್ದಾರೆ. ಕೇವಲ 30 ಸಾವಿರ ರೂ ಅನುದಾನ ಇಟ್ಟುಕೊಂಡ ಶಾಸಕರು ಒಂದು ಕೋಟಿ ರೂ ಅನುದಾನ ವಿವಿಧ ಕಾಮಗಾರಿಗಳ ಭೂಮಿ ಪೂಜೆಯನ್ನ ಮಾಡುವ ಮೂಲಕ ಜನರನ್ನ ವಂಚಿಸಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಆರೋಪಿಸಿದರು.

ಬಾಕ್ಸ್ :
ಗದಗ ದಲಿತಕೇರಿಗಳ ಪ್ರಗತಿಗೆ ಮೀಸಲಾದ ಎಸ್.ಸಿ.ಟಿ.ಎಸ್.ಪಿ ಯೋಜನೆಯ ಸುಮಾರು ೬೦ ಕೋಟಿ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಲಾಗಿದೆ, ಚುನಾವಣೆಯ ನಂತರ ಈ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕಿದೆ, ೧೩೫ ಕೋಟಿ ರೂ ಯೋಜನೆಯ ೨೪*೭ ಕುಡಿಯುವ ನೀರಿನ ಯೋಜನೆ ಹೋಗಿ ಅದು ಹನಿ ನೀರಾವರಿ ಯೋಜನೆ ಆಗಿದೆ, ಗದಗ ಬೆಟಗೇರಿ ಅವಳಿ ನಗರದಲ್ಲಿ ನಿರಂತರ ನೀರು ಬರುವ ಬದಲಿಗೆ ಹನಿ ಹನಿ ನೀರು ಬರುವ ಮೂಲಕ ಅದು ಹನಿ ನೀರಾವರಿ ಯೋಜನೆಯಾಗಿ ಮಾರ್ಪಟ್ಟಿದೆ.
- ಶಿವಪ್ಪ ಮುಳಗುಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net