ದಾರಿದ್ರ್ಯ ವಿಮೋಚನೆಗೆ ವಿದ್ಯೆಯೇ ಅಸ್ತ್ರ

Untitled design (7)
ಸಿರಗುಪ್ಪದ ಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಎಸ್ಸೆಸ್ಸೆಲ್ಸಿಯ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ದಲಿತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ದಲಿತ ವಿದ್ಯಾರ್ಥಿ ಪರಿಷತ್ ಧ್ಯಕ್ಷ ಶ್ರೀನಾಥ ಪೂಜಾರಿ, ಜಿಲ್ಲಾಧ್ಯಕ್ಷ ಲಕ್ಷ್ಮಣ್ ಭಂಡಾರಿ, ಉಪನ್ಯಾಸಕ ಡಾ.ಕೆ.ಎಂ.ಚಂದ್ರಕಾಂತ, ಪಂಪಾಪತಿ, ಕೆಆರ್‌ಪಿಪಿ ಮುಖಂಡ ಟಿ.ಧರಪ್ಪ ನಾಯಕ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗಂಗಪ್ಪ, ಮುಖಂಡರಾದ ಮಹದೇವ, ನಾಗಪ್ಪ ಇದ್ದರು.
Published on

ಸಿರಗುಪ್ಪ: ವಿದ್ಯಾರ್ಥಿ ಜೀವನದಲ್ಲಿ ಧೃತಿಗೆಡದೆ ವಿದ್ಯಾಭ್ಯಾಸದೊಂದಿಗೆ ಗುರಿಯತ್ತ ಸಾಗಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ ಹೇಳಿದರು.

ದುಶ್ಚಟಗಳಿಗೆ ಬಲಿಯಾಗದಿರಿ

ನಗರದ ಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ದಲಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳನ್ನು ಜೀವನ ಅಳವಡಿಸಿಕೊಳ್ಳಬೇಕು. ದಾರಿದ್ರ್ಯ ವಿಮೋಚನೆಗೆ ವಿದ್ಯೆಯೇ ಹೆದ್ದಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಲಕ್ಷ್ಮಣ್ ಭಂಡಾರಿ, ಉಪನ್ಯಾಸಕ ಡಾ.ಕೆ.ಎಂ.ಚಂದ್ರಕಾಂತ, ಪಂಪಾಪತಿ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-2 ಸಹಾಯಕ ನಿರ್ದೇಶಕಿ ರಾಜೇಶ್ವರಿ, ಕೆಆರ್‌ಪಿಪಿ ಮುಖಂಡ ಟಿ.ಧರಪ್ಪ ನಾಯಕ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗಂಗಪ್ಪ, ಮುಖಂಡರಾದ ಮಹದೇವ, ನಾಗಪ್ಪ, ಡಿ.ವೀರೇಶ, ಪಕ್ಕೀರಪ್ಪ, ದುರುಗಪ್ಪ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net