ಸುಗಮ ಸಂಚಾರಕ್ಕೆ ಅನುವು ಮಾಡಿ

25-msk-2
Published on

ಮಸ್ಕಿ: ಇರಕಲ್ ಗ್ರಾಮದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಲು ಒತ್ತಾಯಿಸಿ ತಾಲೂಕು ದಲಿತ ವಿದ್ಯಾರ್ಥಿ ಪರಿಷತ್ ಸದಸ್ಯರು ವಟಗಲ್ ಪಿಡಿಒ ಬಸವರಾಜ ಮನವಿ ಸಲ್ಲಿಸಿದರು.

ಗ್ರಾಮದ ರಸ್ತೆಯಲ್ಲಿ ಎತ್ತುಗಳನ್ನು ಕಟ್ಟುವುದು, ಎತ್ತಿನ ಬಂಡಿಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಡಕಾಗಿದೆ. ಈಗಾಗಲೇ ಸಂಬಂಧಪಟ್ಟವರಿಗೆ ತಿಳಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳಾದ ಆಂಜನಪ್ಪ, ಮೌನೇಶ, ಶಿವಗ್ಯಾನಿ, ಮಲ್ಲೇಶ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net