ದಲಿತ ಹೋರಾಟ ಸಮಿತಿ ಪ್ರತಿಭಟನೆ

25
Published on

ಮೈಸೂರು:ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ರಾಜ್ಯ ದಲಿತ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮುಡಾ ನಿವೇಶನ ಹಂಚಿಕೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕಾಏಕಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಅಸಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಟೀಕಿಸಿದರು.
ರಾಜ್ಯಪಾಲರು ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿಯಂತೆ ವರ್ತಿಸುತ್ತಿರುವುದು ನೇರವಾಗಿ ಕಾಣಿಸುತ್ತಿದ್ದು, ಈ ಕ್ರಮ ಖಂಡನೀಯ. ಕೇವಲ ಖಾಸಗಿ ವ್ಯಕ್ತಿಗಳ ದೂರು ಆಧರಿಸಿ ಯಾವುದೇ ಪರಿಶೀಲನೆ ಮಾಡದೆ ಅನುಮತಿ ನೀಡಿದ್ದಾರೆ. ಆದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರ ವಿರುದ್ಧ ತನಿಖಾ ವರದಿಗೆ ಇದ್ದರೂ ಮುಂದಿನ ಕ್ರಮಕೈಗೊಳ್ಳಲು ಅನುಮತಿ ನೀಡಿಲ್ಲ ಎಂದು ಕಿಡಿಕಾರಿದರು.
ಮುಖಂಡ ಸಿದ್ದಪ್ಪ, ಪರಮೇಶ್, ಎಸ್.ನಂಜಪ್ಪ, ಸಿದ್ದರಾಜು, ರಾಜಣ್ಣ, ಮಹದೇವಣ್ಣ, ಪ್ರಕಾಶ್, ಅಂಕಪ್ಪ, ರವಿ, ರುದ್ರಪ್ಪ, ಮಹದೇವ್, ವನಜಾಕ್ಷಿ, ಸುಜಾತಾ, ನಾಗಣ್ಣ, ಸೋಮಣ್ಣ, ನಂಜಮ್ಮ, ಸಿದ್ದರಾಜು, ಪ್ರಮೋದ್, ರಾಮಕೃಷ್ಣ, ಮಹದೇವಯ್ಯ, ಮಹದೇವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net