ಅವೈಜ್ಞಾನಿಕ ನೀತಿಯಿಂದ ದೌರ್ಜನ್ಯ ಹೆಚ್ಚಳ: ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆರೋಪ

Dalit Sangharsh Samiti press conference Mandya
Published on

ಮಂಡ್ಯ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿ ಹಾಗೂ ವಿದ್ಯೆ, ಅಧಿಕಾರ ಸಂಪತ್ತು, ಭೂಮಿ, ಉದ್ಯೋಗ, ಕೈಗಾರಿಕೆ ಸಮಾನವಾಗಿ ಹಂಚಿಕೆ ಮಾಡುವಲ್ಲಿ ವೈಪಲ್ಯವಾಗಿರುವ ಪರಿಣಾಮ ಮೈಕ್ರೋ ಫೈನಾನ್ಸ್‌ಗಳು ಬಡವರ ಮೇಲೆ ದೌರ್ಜನ್ಯ ನಡೆಯುಸುತ್ತಿವೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ದೂರಿದರು.

ಮೈಕ್ರೋ ಫೈನಾನ್ಸ್ ಕಪಿಮುಷ್ಠಿಗೆ ಸಿಲುಕಿಸಿ ಸಾಲಗಾರರಾಗಿರುವುದು 76 ವರ್ಷ ನಮ್ಮನ್ನಾಳಿದ ಸರ್ಕಾರಗಳ ಸಾಧನೆಯಾಗಿದೆ. ಇದರಿಂದಾಗಿ ಬಡತನ, ಆರ್ಥಿಕ ಹೀನತೆ ಮಿತಿ ಮೀರಿದ್ದು, ಕೊಲೆ, ಸುಲಿಗೆ, ದೌರ್ಜನ್ಯ, ಆತ್ಮಹತ್ಯೆಯಂತಹ ಕೃತ್ಯಗಳು ನಡೆಯುವಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್‌ಕುಮಾರ್ ಮಾತನಾಡಿ, ಮೈಕ್ರೋ ಫೈನಾನ್ಸ್‌ಗಳನ್ನು ಕೂಡಲೇ ಬಂದ್ ಮಾಡಿಸಬೇಕು. ಜತೆಗೆ ಕಿರುಕುಳ ನೀಡುವವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಬಡ್ಡಿ, ಚಕ್ರ ಬಡ್ಡಿ ಮೂಲಕ ವಸೂಲಿ ಮಾಡಿದ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ಥ ಕುಟುಂಬಕ್ಕೆ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಬಿ.ಆನಂದ್, ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತಾ ಆನಂದ್, ತಿಮ್ಮೇಶ್, ಸುಮಾಮಣಿ, ಮುತ್ತುರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net