ವಕೀಲ ರಾಕೇಶ್ ಕಿಶೋರ್ ಪೌರತ್ವ ರದ್ದುಪಡಿಸಲಿ: ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹ

Dalit Sangharsh Committee press conference Mandya
Published on

ಮಂಡ್ಯ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲೆತ್ನಿಸಿ ನ್ಯಾಯಾಂಗಕ್ಕೆ ಅಪಮಾನಗೊಳಿಸಿದ ಹಿರಿಯ ವಕೀಲ ರಾಕೇಶ್ ಕಿಶೋರ್ ಪೌರತ್ವವನ್ನು ರದ್ದುಪಡಿಸುವುದರ ಜತೆಗೆ ದೇಶದಿಂದಲೇ ಗಡಿಪಾರು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು.

ಭಾರತದ ಪ್ರಗತಿ ಭವಿಷ್ಯಕ್ಕಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತ ಸಂವಿಧಾನ ನೀಡಿ 78 ವರ್ಷ ಕಳೆದಿದೆ. ಆದಾಗ್ಯೂ ಮನುಸ್ಮತಿಯನ್ನಾಧರಿಸಿದ ಜಾತಿ, ಲಿಂಗ, ವರ್ಗ ಭೇದವುಳ್ಳ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಯುಳ್ಳ ಕರಾಳ ಕಾನೂನುಗಳನ್ನೇ ಪಾಲಿಸಬೇಕೆಂಬ ದುರ್ವರ್ತನೆ ತೋರುತ್ತಿರುವ ವಕೀಲ ರಾಕೇಶ್ ಕಿಶೋರ್ ಅವಿವೇಕಿ ವ್ಯಕ್ತಿತ್ವವುಳ್ಳವರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವಕ್ಕೆ ಧಕ್ಕೆ ತರುವ ಯಾವುದೇ ಸನಾತನಿ ನೀತಿಗಳು ಕಾನೂನು ಕೈಗೆತ್ತಿಕೊಂಡರೆ ಸಂವಿಧಾನದನ್ವಯ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ಸಂವಿಧಾನದ ಘನತೆ, ಗೌರವ ಮಿಗಿಲಾಗಿ ಭಾರತೀಯ ನ್ಯಾಯಾಂಗದ ಘನತೆಯನ್ನು ರಕ್ಷಿಸಬೇಕು. ಸಂವಿಧಾನ, ನ್ಯಾಯಾಂಗದ ಘನತೆ ಗೌರವವನ್ನು ರಕ್ಷಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಕೀಲ ರಾಕೇಶ್ ಕಿಶೋರ್‌ನ ಭಾರತ ಪೌರತ್ವವನ್ನು ರದ್ದುಪಡಿಸಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಬಿ.ಆನಂದ್, ಮದ್ದೂರು ತಾಲೂಕು ಅಧ್ಯಕ್ಷ ಮುತ್ತುರಾಜ್, ಮಂಡ್ಯ ತಾಲೂಕು ಅಧ್ಯಕ್ಷ ಮಹದೇವ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net