ಮೇ 10 ಮತ್ತು 11ರಂದು ಅಧ್ಯಯನ ಶಿಬಿರ: ದಲಿತ ಹಕ್ಕುಗಳ ಸಮಿತಿ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ ವಿವರ

Dalit Rights Committee press conference Mandya
Published on

ಮಂಡ್ಯ: ದಲಿತ ಹಕ್ಕುಗಳ ಸಮಿತಿ ವತಿಯಿಂದ ದಲಿತರ ಸಾಮಾಜಿಕ ಆರ್ಥಿಕ ರಾಜಕೀಯ ಅಭಿವೃದ್ಧಿ ಕುರಿತು ಅಧ್ಯಯನ ಶಿಬಿರವನ್ನು ಮೇ.10 ಮತ್ತು 11ರಂದು ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ ತಿಳಿಸಿದರು.

ಮೀಸಲಾತಿಯಿಂದಾಗಿ ಅತ್ಯಲ್ಪ ಪ್ರಮಾಣದಲ್ಲಿ ದಲಿತ ಸಮುದಾಯ ಪ್ರಗತಿ ಕಂಡಿದ್ದರೂ, ಬಹುಪಾಲು ದಲಿತರ ಸ್ಥಿತಿ ಅವಲೋಕಿಸಲು ಹಾಗೂ ಪ್ರಜಾಸತ್ತಾತ್ಮಕವಾಗಿ ಸಂಘಟಿಸಲು ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

10ರಂದು ಬೆಳಗ್ಗೆ 11 ಗಂಟೆಗೆ ಸಂಪನ್ಮೂಲ ವ್ಯಕ್ತಿ ಜಿ.ಎನ್.ನಾಗರಾಜು ಶಿಬಿರ ಉದ್ಘಾಟಿಸಿ ಜಾತಿಯ ಹುಟ್ಟು, ವಿಕಾಸ, ವಿನಾಶದ ಕುರಿತು ಉಪನ್ಯಾಸ ನೀಡುವರು. ದಲಿತರ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿ ಕುರಿತು ಬಿ.ರಾಜಶೇಖರಮೂರ್ತಿ ಉಪನ್ಯಾಸ ನೀಡುವರು. 11ರಂದು ದಲಿತರ ವಿಮೋಚನೆಯ ಹಾದಿಗಳ ಕುರಿತು ಯು.ಬಸವರಾಜು, ದಲಿತ ಹಕ್ಕುಗಳ ಸಮಿತಿಯ ಸಂಘಟನೆ ಕುರಿತು ಗೋಪಾಲಕೃಷ್ಣ ಹರಳಹಳ್ಳಿ ಮತ್ತು ಸಂಘಟನೆಯ ಕಾರ್ಯಯೋಜನೆ ಕುರಿತು ಎನ್.ರಾಜಣ್ಣ ಉಪನ್ಯಾಸ ನೀಡಲಿದ್ದಾರೆ. ಅಂತೆಯೇ ಎರಡು ದಿನದ ಶಿಬಿರದಲ್ಲಿ 200 ಜನ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಿತಿ ಕಾರ್ಯಾಧ್ಯಕ್ಷೆ ಸಿ.ಕುಮಾರಿ, ಜಿಲ್ಲಾಧ್ಯಕ್ಷ ಆರ್.ಕೃಷ್ಣ, ಉಪಾಧ್ಯಕ್ಷೆ ಗಿರಿಜಮ್ಮ, ಕಾರ್ಯದರ್ಶಿ ಅಂಬೂಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net