ದಲಿತ ಪರ ಸಂಟನೆಗಳಿಂದ ಪ್ರತಿಭಟನೆ

24MKH1
Published on

ಎಂಕೆ ಹುಬ್ಬಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ&4ರ ಪಕ್ಕದ ಗಾಂಧಿ ನಗರದಲ್ಲಿ ಡಾ.ಬಾಬು ಜಗಜೀವನರಾಮ್​ ಭವನ ನಿರ್ಮಾಣಕ್ಕೆ ಕಾಯ್ದಿರಿಸಿದ ಖಾಲಿ ಜಾಗದಲ್ಲಿ ದಲಿತ ಸಂರ್ಷ ಸಮಿತಿ ಅಳವಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್​.ಅಂಬೇಡ್ಕರ್​ ಭಾವಚಿತ್ರಕ್ಕೆ ಏ.21ರಂದು ದುಷ್ಕರ್ಮಿಗಳು ಕಪ್ಪುಬಣ್ಣ ಬಳಿದು ಅವಮಾನಿಸಿದ್ದನ್ನು ಖಂಡಿಸಿ ಗುರುವಾರ ದಲಿತ ಸಂಟನೆಗಳಿಂದ ಪಟ್ಟಣದಲ್ಲಿ ಬಂದ್​ ನಡೆಸಲಾಯಿತು.

ಅಂಬೇಡ್ಕರ್​ ಗಲ್ಲಿಯ ಡಾ.ಬಿ.ಆರ್​.ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ದಲಿತಪರ ಸಂಟನೆಗಳು ಮತ್ತು ಸಮುದಾಯದ ಜನರು, ಕಪ್ಪುಬಣ್ಣ ಬಳಿದ ದುಷ್ಟರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ಅವಮಾನ ಖಂಡಿಸಲು ಬಾರದ ಜನಪ್ರತಿನಿಧಿಗಳು ಮತ ಪಡೆಯಲು ಮಾತ್ರ ಸೀಮಿತವಾಗಿದ್ದಾರೆ ಎಂದು ಕಿಡಿಕಾರಿದರು. ಟನಾ ಸ್ಥಳಕ್ಕೆ ತೆರಳಿ ಮುಖಂಡರು ಅಂಬೇಡ್ಕರ್​ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ದೇಶಕ್ಕೆ ಉತ್ತಮ ಸಂವಿಧಾನ ನೀಡಿದ ಅಂಬೇಡ್ಕರ್​ ಅವರಿಗೆ ಆದ ಅವಮಾನ ನಾವು ಸಹಿಸುವುದಿಲ್ಲ. ಅವರಿಗೆ ಕಪ್ಪುಬಣ್ಣ ಬಳಿದವರಿಗೆ ತಕ್ಕ ಶಿೆಯಾಗಬೇಕು. ಈ ಕೃತ್ಯವನ್ನು ಜಾತ್ಯತಿತ, ಪಾತೀತವಾಗಿ ಎಲ್ಲರೂ ಖಂಡಿಸಬೇಕು. ಮುಂಬರುವ ಆರು ದಿನದೊಳಗೆ ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ಬೆಳಗಾವಿಯ ಐಜಿ ಕಚೇರಿ ಎದುರು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಚನ್ನಮ್ಮ ಕಿತ್ತೂರು ತಹಸೀಲ್ದಾರ್​ ಮೂಲಕ ಮುಖ್ಯಮಂತ್ರಿ, ಗಹ ಸಚಿವರಿಗೆ ಮನವಿ ಸಲ್ಲಿಸಿದರು. ತಹಸೀಲ್ದಾರ್​ ರವೀಂದ್ರ ಹಾದಿಮನಿ ಮಾತನಾಡಿ, ಡಾ. ಬಿ.ಆರ್​. ಅಂಬೇಡ್ಕರ್​ ಅವರಿಗೆ ಕಪು$್ಪಬಣ್ಣ ಬಳಿದವರ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಲು ಈಗಾಗಲೇ ಪೊಲೀಸ್​ ಇಲಾಖೆಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಪೊಲೀಸರು ಬಂಧಿಸುತ್ತಾರೆಂದು ಭರವಸೆ ನೀಡಿದರು.

ಎಂದಿನಂತೆ ವ್ಯಾಪಾರ ನಡೆಸಿದ ವ್ಯಾಪಾರಸ್ಥರು: ಎಂ.ಕೆ.ಹುಬ್ಬಳ್ಳಿ ಬಂದ್​ಗೆ ಕರೆಗೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ವ್ಯಾಪಾರ ನಡೆಸಿದವು. ಕೆಲವರು ಕೆಲಗಂಟೆಗಳ ಕಾಲ ಮಾತ್ರ ಸ್ವಯಂಪ್ರೇರಿತವಾಗಿ ಅಂಗಡಿ ಮುಚ್ಚಿದ್ದರು.

ಪಪಂ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಸಿಪಿಐ ಗಜಾನನ ನಾಯಕ, ಪಿಎಸ್​ಐ ಪ್ರವಿಣ ಗಂಗೊಳ್ಳಿ, ಹಾಗೂ ಪೊಲೀಸರು, ಸ್ಥಳಿಯ ಡಾ. ಬಾಬಾಸಾಹೇಬ ಅಂಬೇಡ್ಕರ್​ ಅಭಿವದ್ಧಿ ಸಂದ ಅಧ್ಯ ಸಂಜೀವ ಹುಬಳೆಪ್ಪನವರ, ಉಪಾಧ್ಯ ಚೇತನ ದೇಮಟ್ಟಿ, ಡಿಎಸ್​ಎಸ್​ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ, ಜಿಲ್ಲಾ ಸಂಚಾಲಕ ರವಿ ಬಸ್ತವಾಡಕರ್​, ಸುರೇಶ ಸಣ್ಣಮನಿ, ಉಮೇಶ ಕೋಲಕಾರ, ಸಂದೀಪ ಚಲವಾದಿ, ಕಸ್ತೂರೆವ್ವ ತಳವಾರ, ರಾವೇಂದ್ರ ಚಲವಾದಿ, ವಿಜಯಾ ರಾಯಣ್ಣವರ, ಲಕ್ಷಿ$್ಮ ಗೋಟೂರ, ಅದಶ್ಯ ಹಿಂಡಲಗಿ, ರಾಜಶೇಖರ ಚಲವಾದಿ, ಮನೋಹರ ಚಲವಾದಿ, ಸಹದೇವ ಪಾಗಾದ, ಬಸವರಾಜ ಕೆಳಗಡೆ ಹಾಗೂ ವಿವಿಧ ದಲಿತಪರ ಸಂಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net