ದಲಿತ ಸಾಹಿತಿಯೇ ಸರ್ವಾಧ್ಯಕ್ಷರಾಗಲಿ

Dalit Literature, Sarvadhyaksha, Basavanbagewadi, Ivanagi, Taluk Kannada Sahitya Sammelan, Bheem Army, Bharat Ekta Mission
ಬಸವನಬಾಗೇವಾಡಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ದಲಿತ ಸಾಹಿತಿಯನ್ನು ಆಯ್ಕೆ ಮಾಡುವಂತೆ ಕಸಾಪ ತಾಲೂಕು ಅಧ್ಯಕ್ಷ ಶಿವಾನಂದ ಡೋಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು. ಮುತ್ತುರಾಜ್ ಬಾಗೇವಾಡಿ, ವಾಯ್.ಎಮ್.ಪಡಸಲಗಿ, ತಮ್ಮಣ್ಣ ಕಾನಾಗಡ್ಡಿ, ರಾಯಪ್ಪ ನನ್ನಿಕೇರಿ ಇದ್ದರು.
Published on

ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದಲ್ಲಿ ನವೆಂಬರ್ 13ರಂದು ಜರುಗಲಿರುವ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ದಲಿತ ಸಾಹಿತಿಯನ್ನೇ ಆಯ್ಕೆ ಮಾಡುವಂತೆ ಭೀಮ್ ಆರ್ಮಿ, ಭಾರತ ಏಕತಾ ಮಿಷನ್ ಹಾಗೂ ವಿವಿಧ ದಲಿತಪರ ಸಂಘಟನೆಗಳು ತಾಲೂಕು ಕಸಾಪ ಘಟಕಕ್ಕೆ ಮನವಿ ಸಲ್ಲಿಸಿದವು.

ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಅಧ್ಯಕ್ಷ ಮುತ್ತುರಾಜ್ ಬಾಗೇವಾಡಿ ಮಾತನಾಡಿ, 12ನೇ ಶತಮಾನದಲ್ಲಿ ಇಡೀ ವಿಶ್ವಕ್ಕೆ ಸಮಾನತೆ ಸಾರಿದಂತಹ ವಿಶ್ವಗುರು ಬಸವಣ್ಣವರ ಜನ್ಮ ಭೂಮಿಯಲ್ಲಿ ಜರುಗುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ದಲಿತ ಸಾಹಿತಿಯನ್ನು ಸರ್ವಾಧ್ಯಕ್ಷರನಾಗಿ ಮಾಡುವ ಮೂಲಕ ಸಮಾನತೆ ಸಾರಬೇಕು ಎಂದರು.

ಈ ಸಂದರ್ಭದಲ್ಲಿ ವಾಯ್.ಎಮ್.ಪಡಸಲಗಿ, ತಮ್ಮಣ್ಣ ಕಾನಾಗಡ್ಡಿ, ರಾಯಪ್ಪ ನನ್ನಿಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net