ದಲಿತ ಮುಖಂಡರಿಂದ ಒಳ ಮೀಸಲಾತಿ ಸಂಭ್ರಮಾಚರಣೆ

Dalit leaders celebrate internal reservation
ಲೋಕಾಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದಲಿತ ಮುಖಂಡರು ಒಳ ಮೀಸಲಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದ್ದಕ್ಕೆ ವಿಜಯೋತ್ಸವ ಆಚರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕುಮಾರ ಕಾಳಮ್ಮನವರ, ಸುರೇಶ ಪೂಜಾರಿ, ರವಿ ರೊಡಪ್ಪನ್ನವರ, ರಂಗನಾಥ ಚಿಪ್ಪಲಕಟ್ಟಿ ಇತರರಿದ್ದರು.
Published on

ಲೋಕಾಪುರ : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಡ, ಬಲ ಹಾಗೂ ಇತರೆ ಎಂದು ಮೂರು ವಿಂಗಡನೆ ಮಾಡಿ ಮರುವರ್ಗೀಕರಿಸಿ ಒಳಮೀಸಲಾತಿ ಮರುಹಂಚಿಕೆಗೆ ತೀರ್ಮಾನಿಸಿ ವಿಶೇಷ ಸಚಿವ ಸಂಪುಟದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಸ್ವಾಗತಿಸಿದ್ದು, ಸ್ಥಳೀಯ ದಲಿತ ಮುಖಂಡರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ದಲಿತ ಮುಖಂಡ ಕುಮಾರ ಕಾಳಮ್ಮನವರ ಮಾತನಾಡಿ, ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳು ಕಳೆದ ಮೂರು ದಶಕಗಳಿಂದ ಇಟ್ಟಿದ್ದ ಬೇಡಿಕೆ ಈಡೇರಿದಂತಾಗಿದೆ, ದಲಿತ ಸಮುದಾಯದ ಒಳ ಮೀಸಲಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದ್ದಕ್ಕೆ ನಮ್ಮ ಸಮುದಾಯ ಸಂತಸಗೊಂಡಿದೆ ಎಂದರು.

ಮಾಜಿ ಗ್ರಾಪಂ ಸದಸ್ಯ ರವಿ ರೊಡ್ಡಪ್ಪನವರ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಹಳ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಲ್ಲರಿಗೂ ತೃಪ್ತಿ ನೀಡುವ ನಿರ್ಧಾರವಾಗಿದೆ, ಪರಿಶಿಷ್ಟ ಜಾತಿಯ ನೂರೆಂದು ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಿದ್ದು ಯಾವುದೇ ಜಾತಿಗೂ ಅನ್ಯಾಯವಾಗದ ರೀತಿಯಲ್ಲಿ ತೀರ್ಮಾನವಾಗಿದೆ ಎಂದು ಅಭಿಪ್ರಾಯ ಪಟ್ಟರು.

ದುರಗಮ್ಮ ಕಾಳಮ್ಮನವರ, ಜಿಲ್ಲಾ ಕೆಡಿಪಿ ಸದಸ್ಯ ಹಣಮಂತ ಪೂಜಾರಿ, ಸುರೇಶ ಪೂಜಾರಿ, ವಿಠ್ಠಲ ಕನಸಗೇರಿ, ಸಂಕ್ರೆಪ್ಪ ಚವಡಾಪುರ, ಪರಸಪ್ಪ ಪರಸಣ್ಣವರ, ಹಣಮಂತ ಚಿಕ್ಕೂರ, ವಿಠ್ಠಲ ಚಿಕ್ಕೂರ, ಯಮನಪ್ಪ ಜಾಲಿಕಟ್ಟಿ, ರಂಗನಾಥ ಚಿಪ್ಪಲಕಟ್ಟಿ, ಶಂಕರ ನಾಗಣಾಪುರ, ಆನಂದ ಹುಗ್ಗಿ, ಲಂಕೇಶ ವರ್ಚಗಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net