ದಲಿತ ಕೇರಿಗಳಿಗೆ ಸೌಕರ್ಯ ಕಲ್ಪಿಸಿ

051020 Lingasuguru Dalit Samiti Protest
ದಲಿತ ಕೇರಿಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಲಿಂಗಸುಗೂರು ಪುರಸಭೆ ಆವರಣದಲ್ಲಿ ದಸಂಸ ಮುಖಂಡರು ಸೋಮವಾರ ಧರಣಿ ನಡೆಸಿದರು.
Published on

ಲಿಂಗಸುಗೂರು: ದಲಿತ ಕೇರಿಗಳಿಗೆ ಕುಡಿವ ನೀರು, ಸಿಸಿ ರಸ್ತೆ, ಚರಂಡಿ, ವಿದ್ಯುತ್ ದೀಪ, ಸಾರ್ವಜನಿಕ ಶೌಚಗೃಹ ಸೇರಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುರಸಭೆ ಆವರಣದಲ್ಲಿ ದಲಿತ ಸಂರಕ್ಷ ಸಮಿತಿ ಮುಖಂಡರು ಸೋಮವಾರ ಧರಣಿ ನಡೆಸಿದರು.

ಪುರಸಭೆಯ ಶೇ.22 ಅನುದಾನದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸುಮಾರು ವರ್ಷಗಳಿಂದ ಒದಗಿಸಿಲ್ಲ. 40 ವಾಣಿಜ್ಯ ಮಳಿಗೆಗಳ ಅವಧಿ ಮುಗಿದರೂ ಟೆಂಡರ್ ಕರೆದಿಲ್ಲ. ಕೂಡಲೇ ಟೆಂಡರ್ ಕರೆದು ಎಸ್ಸಿ, ಎಸ್ಟಿಗೆ ಮೀಸಲಿಡಬೇಕು. ಪೌರ ಕಾರ್ಮಿಕರಿಗೆ ಶೂ, ಸಮವಸ್ತ್ರ, ಕೈ ಕವಚ ಸೇರಿ ಸೌಲಭ್ಯ ಒದಗಿಸಬೇಕು. ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. 2019-20 ನೇ ಸಾಲಿನ 14ನೇ ಹಣಕಾಸಿನ ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದೆ. ಡಾ.ಬಾಬು ಜಗಜೀವನರಾಂ ಭವನಕ್ಕೆ ಮೀಸಲಿಟ್ಟ ಜಾಗ ರೈತ ಸಂಪರ್ಕ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದು, ಕೂಡಲೇ ರದ್ದು ಪಡಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net