

ಯಾದಗಿರಿ: ವಡಗೇರಾ ತಾಲೂಕಿನ ಐಕೂರು ಹಾಗೂ ಹಂಚಿನಾಳ ಗ್ರಾಮಗಳಲ್ಲಿ ಸ್ಥಳ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ಇಲ್ಲಿನ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.
ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಹಂಚಿನಾಳ ಗ್ರಾಮದಲ್ಲಿ ಸಕರ್ಾರ ನೀಡಿದ ಜಮೀನು ಬಿಟ್ಟು ಪಕ್ಕದಲ್ಲಿರುವ ಪಟ್ಟಾ ಭೂಮಿಯಲ್ಲಿ ಆಶ್ರಯ ಮನೆಗಳನ್ನು ಕಟ್ಟಿಸಿಕೊಂಡು ಅಕ್ರಮ ಎಸಗಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೇ ಐಕೂರು ಗ್ರಾಮದಲ್ಲಿ ಮನೆ ನಿಮರ್ಿಸುತ್ತಿರುವ ವ್ಯಕ್ತಿ ಅಕ್ರಮವಾಗಿ ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ನಿಯಮಾವಳಿಗಳನ್ನು ಉಲ್ಲಂಘಿಸಿ ಮನೆ ಕಟ್ಟಿಕೊಳ್ಳುತ್ತಿದ್ದುದಲ್ಲದೇ ಪಕ್ಕದ ರಸ್ತೆಯ ಜಾಗ ಒತ್ತುವರಿ ಮಾಡಿ ಕಟ್ಟಿಕೊಳ್ಳುತ್ತಿದ್ದು, ಈ ಕುರಿತು ತಾಪಂ ಅಧಿಕಾರಿಗಳು ವರದಿ ಸಲ್ಲಿಸಿದ್ದರೂ ಈ ಅನ್ಯಾಯದ ವಿರುದ್ಧ ದೂರು ಸಲ್ಲಿಸಲಾಗಿದ್ದರೂ ಕ್ರಮವಹಿಸಿಲ್ಲ ಎಂದು ದೂರಿದರು.
ಫೆಬ್ರುವರಿ 11ರೊಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ತಾಪಂ ಎದುರು ಪ್ರತಿಭಟನೆ ನಡೆಸಲಾಗುವುದು, ಇದಕ್ಕೂ ವಿಳಂಬವಾದಲ್ಲಿ 18 ರಂದು ವಡಗೇರಾ ತಹಸಿಲ್ ಕಚೇರಿ ಎದುರಿಗೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಜೀಜಸಾಬ್ ಐಕೂರು, ತಿಪ್ಪಣ್ಣ ಲಂಡನಕರ್, ಮಲ್ಲಿಕಾಜರ್ುನ ಮಳ್ಳಳ್ಳಿ, ರಮೇಶ ಹುಂಡೇಕಲ್, ದೇವಿಂದ್ರಪ್ಪ ಮೈಲಾಪೂರ, ಭೀಮಣ್ಣ ಹುಣಸಗಿ, ಮೈಬೂಬಸಾಬ ವಡಗೇರಾ, ಹುಲಿಗೆಪ್ಪ ನಟೇಕರ್, ಬಸವರಾಜ ಕಲ್ಲದೇವನಳ್ಳಿ, ಬಸಪ್ಪ ಅಗತೀರ್ಥ ಇದ್ದರು.