ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹ

dss
Published on

ಯಾದಗಿರಿ: ಜಿಲ್ಲಾದ್ಯಂತ ಅರಣ್ಯ ಬೆಳೆಸುವ ನೆಪದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅವ್ಯವಹಾರ ನಡೆಸುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಇಲ್ಲಿನ ಜಿಪಂ ಉಪ ಕಾರ್ಯದಶರ್ಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಜಿಲ್ಲೆಯಲ್ಲಿನ ಮುಖ್ಯರಸ್ತೆ ಇತರೆ ರಸ್ತೆಗಳು ಬದಿಯಲ್ಲಿ ಬೆಳೆದ ಗಿಡಗಳನ್ನು ಕುರಿಗಾಯಿಗಳಿಂದ ರಕ್ಷಿಸುವಲ್ಲಿ ವಿಫಲರಾಗಿದ್ದುದಲ್ಲದೆ ಅರಣ್ಯ ಬೆಳೆಸುವ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಸಣ್ಣ ಗಿಡಗಳನ್ನು ರಸ್ತೆಗಳ 2 ಬದಿಯಲ್ಲಿ ನೆಡದೆ ಪಂಚಾಯಿತಿ ಸೇರಿ ಇತರೆ ಜನಪ್ರತಿನಿಧಿಗಳು ಭಾಗಿಯಾಗಿ ಅರಣ್ಯ ಬೆಳೆಸುವ ಹೆಸರಲ್ಲಿ ಲೂಟಿ ಮಾಡುತ್ತಿರುವುದನ್ನು ಕಂಡು ಬಂದಿದೆ. ಅರಣ್ಯಾಧಿಕಾರಿಗಳೊಂದಿಗೆ ಗ್ರಾಪಂ, ತಾಪಂ ಹಾಗೂ ಜಿಪಂ ಅಧಿಕಾರಿಗಳು ಶ್ಯಾಮೀಲಾಗಿ ಕೋಟಿಗಟ್ಟಲೆ ಅವ್ಯವಹಾರ ನಡೆಸಿದ್ದಾರೆ. ಕೂಡಲೇ ಈ ಬಗ್ಗೆ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯಾಧಿಕಾರಿಗಳು ಮೇಲೆ ಶಿಸ್ತು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.

ತಿಪ್ಪಣ್ಣ ಲಂಡನಕರ್, ಚಂದ್ರಕಾಂತ. ಹಂಪಿನ್, ದೇವಿಂದ್ರಪ್ಪ ಮೈಲಾಪೂರ, ಮಲ್ಲಪ್ಪ ಅರಕೇರಿ, ಮಲ್ಲಿಕಾಜರ್ುನ, ಬಸವಂತಪುರ, ಮುತ್ತುರಾಜ, ಹುಲಿಕೇರಿ, ಮಲ್ಲಿಕಾಜರ್ುನ ಮಳ್ಳಳ್ಳಿ ಶಹಾಪುರ, ಶರಣಪ್ಪ ಉಳ್ಳೆಸೂಗೂರ, ಮರೆಪ್ಪ. ಹಾಲಗೇರಾ, ಮಲ್ಲಿಕಾಜರ್ುನ ಉಕ್ಕಿನಾಳ, ನಿಂಗಪ್ಪ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net