ಹೊಳೆಯ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದ ಯುವಕ

ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಘಟನೆ
missing
missing
Published on: 

ಕಾಸರಗೋಡು: ಬೇಡಡ್ಕ ಪಾಂಡಿಕಂಡ ಎಂಬಲ್ಲಿ ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕಿಳಿದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ. ಬೇಡಡ್ಕ ಸನಿಹದ ಮಣ್ಣಡ್ಕ ನಿವಾಸಿ ವಾಧವನ್ ಎಂಬುವರ ಪುತ್ರ ಅರ್ಜುನ್(26) ನಾಪತ್ತೆಯಾದ ಯುವಕ. ಪಾಂಡಿಕ್ಕಂಡಂ ರೆಗ್ಯುಲೇಟರ್ ಕಂ ಬ್ರಿಡ್ಜ್ ಸಮೀಪ ಪಯಸ್ವಿನಿ ನದಿಯಲ್ಲಿ ಸ್ನಾನ ವಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅರ್ಜುನ್ ನಾಪತ್ತೆಯಾಗಿದ್ದರು. ಈ ಬಗ್ಗೆ ವಾಹಿತಿ ಪಡೆದ ಕುತ್ತಿಕ್ಕೋಲಿನ ಅಗ್ನಿಶಾಮಕ ದಳ ಹಾಗೂ ಕಾಸರಗೋಡಿನಿಂದ ಸ್ಕೂಬಾ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಪತ್ತೆ ಸಾಧ್ಯವಾಗಿರಲಿಲ್ಲ. ಅದೂರು ಪೊಲೀಸರೂ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಜೂಜಾಟನಿರತ ಐವರ ಬಂಧನ

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಏತಡ್ಕಗಾಳಿ ಗೋಪುರ ರಸ್ತೆ ಬದಿಯ ಜನಸಂಚಾರವಿಲ್ಲದ ಸ್ಥಳದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಕ್ಕಿನಡ್ಕ ಗುತ್ತು ಹೌಸ್‌ನ ಸುಧಾಕರ(52), ಏತಡ್ಕ ಜೀಂತಡ್ಕದ ಟಿ.ಲೋಕೇಶ್ ಕುವಾರ್(32), ಉಕ್ಕಿನಡ್ಕ ಕಂಗಿಲ ಗುತ್ತುವಿನ ಸಂಜು(60), ಪಳ್ಳತ್ತಡ್ಕದ ಟಿ.ವಿನೋದ್(35) ಹಾಗೂ ಏತಡ್ಕ ಅಣ್ಣಪ್ಪಳ್ಳದ ಗಣೇಶ್(41) ಬಂಧಿತರು. ಇವರಿಂದ ಜೂಜಾಟಕ್ಕೆ ಬಳಸಿದ್ದ 2,800 ರೂ. ನಗದು ವಶಪಡಿಸಿಕೊಂಡಿದ್ದಾರೆ. ಬದಿಯಡ್ಕ ಠಾಣೆ ಎಸ್.ಐ. ಟಿ.ಸುನೀಲ್ ಕುವಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡ ನಂತರ ಸ್ಟೇಷನ್ ಜಾಮೀನಿನ ಮೇಲೆ ಬಂಧಿತರನ್ನು ಬಿಡುಗಡೆ ವಾಡಲಾಗಿದೆ.

ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್ ಬಂಧನ

ಕಾಸರಗೋಡು: ವಿವಿಧ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಉಪ್ಪಳ ನಿವಾಸಿ ರಾವುಫ್ ಯಾನೆ ಮೀಸೆ ರಾವುಫ್ ಎಂಬಾತನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠರ ನೇತೃತ್ವದ ವಿಶೇಷ ತನಿಖಾ ದಳ ಮತ್ತು ಕುಂಬಳೆ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮುಂಬೈಯಲ್ಲಿ ಬಂಧಿಸಿದ್ದಾರೆ.

ಗ್ಯಾರೇಜ್‌ಗೆ ಬೆಂಕಿ, ಖಡ್ಗ ಬೀಸಿ ನಾಗರಿಕರಲ್ಲಿ ಭಯ ಸೃಷ್ಟಿ ಹಾಗೂ ಇರಿತ ಪ್ರಕರಣ ಸೇರಿ 20ಕ್ಕೂ ಹೆಚ್ಚು ಅಪರಾಧ ಕತ್ಯಗಳಲ್ಲಿ ಈತ ಆರೋಪಿಯಾಗಿದ್ದಾನೆ. ಪ್ರಕರಣ ದಾಖಲಾದಾಗ ಬಳಿಕ ತಲೆಮರೆಸಿಕೊಳ್ಳುವುದು ಈತನ ಹವ್ಯಾಸವಾಗಿತ್ತು. ಆರೋಪಿಯ ಪತ್ತೆಗಾಗಿ ಮುಂಬಯಿಯ ಶಂಕಿತ ಸ್ಥಳಗಳಲ್ಲಿನ ನೂರಕ್ಕೂ ಅಧಿಕ ಸಿಸಿಟಿವಿ ದಶ್ಯಾವಳಿಗಳನ್ನು ಪರಿಶೀಲಿಸಿದ್ದಲ್ಲದೆ, ಸೈಬರ್ ಸೆಲ್ ನೆರವನ್ನೂ ಪಡೆಯಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net