ನೀತಾ ತಂದೆ ಗುಡ್ಡಪ್ಪ ರೈ 20 ವರ್ಷಗಳ ಹಿಂದೆ ಕೌಟುಂಬಿಕ ಕಲಹ ಕಾರಣದಿಂದಾಗಿ ಕುಟುಂಬದಿಂದ ದೂರವಾಗಿದ್ದು, ಅವರ ಪತ್ನಿ ಸುಮತಿ ಪುತ್ರಿಯರಾದ ಗೀತಾ ಮತ್ತು ನೀತಾ ಜತೆ ವಾಸವಿದ್ದರು. ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ನೀತಾ ಅವರಿಗೆ 2016ರ ಬಳಿಕ ತಲೆನೋವು, ಕುತ್ತಿಗೆ, ಬೆನ್ನುಹುರಿ ನೋವು, ನರ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಮನೆಯಲ್ಲಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇತ್ತೀಚೆಗೆ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ನಡೆದಾಡುವ ಹಂತಕ್ಕೆ ತಲುಪಿದ್ದರು.