ತಲೆಯಿಂದ ರಕ್ತಸ್ರಾವವಾಗಿ ಯುವಕ ಮೃತ್ಯು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಬೆಳ್ತಂಗಡಿ: ಗುರುವಾಯನಕೆರೆಯ ಯರ್ಡೂರು ದಿ.ಶ್ರೀಧರ ಭಟ್ ಮತ್ತು ಗೀತಾ ದಂಪತಿ ಪುತ್ರ ಮುರಳೀಧರ ಭಟ್(35) ಎಂಬುವರು ಮನೆಯೊಳಗಡೆ ಬಿದ್ದು ತಲೆಗೆ ಬಿದ್ದ ಏಟಿನಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.



ಅವರ ತಾಯಿ ಕಾಲಿನ ಆಪರೇಷನ್ ಆಗಿ ಗೇರುಕಟ್ಟೆ ಕುಂಠಿಣಿಯ ಪುತ್ರಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಯರ್ಡೂರಿನ ತನ್ನ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗ್ಗೆ ಗೀತಾ ಭಟ್ ಮನೆಗೆ ಬಂದಾಗ ಮನೆ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿದ್ದು, ಮಗನನ್ನು ಕರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಮನೆಯ ಹಿಂದಿನ ಕಿಟಿಕಿ ಮೂಲಕ ನೋಡಿದಾಗ ಮುರಳಿ ಕವಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಭಾಗದಿಂದ ರಕ್ತ ಹರಿದು ಹೋಗಿರುವುದು ಕಂಡುಬಂದಿದೆ. ಕೂಡಲೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ, ಬಳಿಕ ಮನೆಯ ಹಿಂದಿನ ಬಾಗಿಲನ್ನು ತೆರೆದು ನೋಡಿದಾಗ ಮುರಳಿ ಮೃತಪಟ್ಟಿರುವುದು ದೃಢಪಟ್ಟಿದೆ.


ಮುರಳೀಧರ ಭಟ್ ಧರ್ಮಸ್ಥಳದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಒಬ್ಬರೇ ಇದ್ದರು. ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಆದರೆ ರಾತ್ರಿ ಮನೆಯಲ್ಲಿ ಬಿದ್ದು ತಲೆಗೆ ಬಿದ್ದ ಏಟಿನಿಂದ ರಕ್ತಸ್ರಾವವಾಗಿ ಎರಡು ದಿನದ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net