ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

 ‘ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮವನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಕಿರಣ್‌ಚಂದ್ರ ಪುಷ್ಪಗಿರಿ, ಆನಂದ ಕುಂಟಿನಿ, ಸಂತೋಷ್ ಮತ್ತಿತರರು ಇದ್ದರು.
‘ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮವನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಕಿರಣ್‌ಚಂದ್ರ ಪುಷ್ಪಗಿರಿ, ಆನಂದ ಕುಂಟಿನಿ, ಸಂತೋಷ್ ಮತ್ತಿತರರು ಇದ್ದರು.
Published on

ಕಡಬ: ಜಗತ್ತಿಗೆ ಯೋಗವನ್ನು ಪರಿಚಯಿಸಿದ ದೇಶ ಭಾರತ. ಎಸ್‌ಪಿವೈಎಸ್‌ಎಸ್ ಸಂಸ್ಥೆ ಯೋಗವನ್ನು ಎಲ್ಲರಿಗೂ ಉಚಿತವಾಗಿ ಕಲಿಸುತ್ತಿದ್ದು ಇದರಿಂದ ಅನೇಕ ಜನರಿಗೆ ಪ್ರಯೋಜನವಾಗಿದೆ. ಇದೊಂದು

ಮಾ

ದರಿ ಕಾರ್ಯವಾಗಿದ್ದು ಎಲ್ಲರೂ ಯೋಗಭ್ಯಾಸದಲ್ಲಿ ಭಾಗಿಯಾಗಿ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಮಾ

ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಆನಂದ ಕುಂಟಿನಿ ಮಾತನಾಡಿದರು. ಎಸ್‌ಪಿವೈಎಸ್‌ಎಸ್ ಉಪ್ಪಿನಂಗಡಿ ವಲಯದ ಸಂಚಾಲಕ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಆಲಂಕಾರಿನ ವೈದ್ಯ ಡಾ.ಆಕಾಶ್ ಗದ್ದೆಗೆ ಹಾಲು ಎರೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಗದ್ದೆಯ ವಾಲೀಕ ಉಮೇಶ್ ವಾಯಿಲ್ಗ ಉಪಸ್ಥಿತರಿದ್ದರು. ದಮಯಂತಿ ಸ್ವಾಗತಿಸಿದರು. ಮುರಳಿಮೋಹನ್ ವಂದಿಸಿದರು. ನಾರಾಯಣ ನೆಕ್ಕರೆ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net