ರೋಗ ನಿಯಂತ್ರಣಕ್ಕೆ ಯೋಗ ಸಹಕಾರಿ

 ವೇಣೂರಿನ ವೈದ್ಯ ಡಾ.ಶಾಂತಿಪ್ರಸಾದ್ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿದರು. ಪ್ರವೀಣ್‌ಚಂದ್ರ ಜೈನ್, ಕೆ.ವಿಜಯ ಗೌಡ, ಸುಂಧೀರ್ ಭಂಡಾರಿ, ದುರ್ಗಾದಾಸ್ ಶೆಟ್ಟಿ, ಸದಾನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ವೇಣೂರಿನ ವೈದ್ಯ ಡಾ.ಶಾಂತಿಪ್ರಸಾದ್ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿದರು. ಪ್ರವೀಣ್‌ಚಂದ್ರ ಜೈನ್, ಕೆ.ವಿಜಯ ಗೌಡ, ಸುಂಧೀರ್ ಭಂಡಾರಿ, ದುರ್ಗಾದಾಸ್ ಶೆಟ್ಟಿ, ಸದಾನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Published on
ಬೆಳ್ತಂಗಡಿ: ಇದೊಂದು ಸಮಾಜಮುಖಿ ಕಾರ್ಯವಾಗಿದ್ದು, ಗ್ರಾಮೀಣ ಭಾಗದ ಜನತೆಗೆ ವರದಾನವಾಗಿದೆ. ಯೋಗ, ಪ್ರಾಣಾಯಾಮಗಳ ಹವ್ಯಾಸದಿಂದ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ವೇಣೂರಿನ ವೈದ್ಯ ಡಾ.ಶಾಂತಿಪ್ರಸಾದ್ ಹೇಳಿದರು.
ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘ, ಶ್ರೀ ಸತ್ಯನಾರಾಯಣ ಭಜನಾ ಮಂದಿರ ಗುಂಡೂರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ ಗುಂಡೂರಿ, ಗಾಪಂ ಆರಂಬೋಡಿ, ಲಯನ್ಸ್ ಕ್ಲಬ್ ವೇಣೂರು, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಹಾಗೂ ಯುವಸೇವಾ ಸಂಗಮ ಸೇವಾ ಟ್ರಸ್ಟ್ ವೇಣೂರು ಆಶ್ರಯದಲ್ಲಿ ಕಸ್ತೂರ್‌ಬಾ ಮೆಡಿಕಲ್ ಕಾಲೇಜು ಮಂಗಳೂರು (ಕೆಎಂಸಿ) ನುರಿತ ವೈದ್ಯರ ತಂಡದಿಂದ ಗುಂಡೂರಿಯ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ಭಾನುವಾರ ಆರೋಗ್ಯ ತಪಾಸಣಾ ಶಿಬಿರ ಉಚಿತ ಉದ್ಘಾಟಿಸಿ ಮಾತನಾಡಿದರು.
ಶ್ರೀ ಸತ್ಯನಾರಾಯಣ ಭಜನಾ ಮಂದಿರ ಅಧ್ಯಕ್ಷ ಪಿ.ರಮೇಶ್ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರಂಬೋಡಿ ಗ್ರಾಪಂ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್, ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿಜಯ ಗೌಡ, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸುಂಧೀರ್ ಭಂಡಾರಿ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ, ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕುಮಾರ್ ಹೆಗ್ಡೆ, ಒಕ್ಕೂಟ ಅಧ್ಯಕ್ಷ ಸದಾನಂದ ಪೂಜಾರಿ, ಕೆಎಂಸಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಅರ್ಬರ್ಟ್ ಡಿಸೋಜ, ಸೇವಾಪ್ರತಿನಿಧಿ ಹರೀಶ್ ಪೂಜಾರಿ, ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘ ಕಾರ್ಯದರ್ಶಿ ರಾಜು ಪೂಜಾರಿ ಉಪಸ್ಥಿತರಿದ್ದರು.
ಹರೀಶ್ ಕುಮಾರ್ ಪೊಕ್ಕಿ ಸ್ವಾಗತಿಸಿ, ಪಿಡಿಒ ಗಣೇಶ್ ಶೆಟ್ಟಿ ನಿರೂಪಿಸಿದರು. ವಿಶೇಷವಾಗಿ ಕಣ್ಣು ಪರೀಕ್ಷೆ, ಕಿವಿ, ಮೂಗು, ಗಂಟಲು ಪರೀಕ್ಷೆ (ಇಎನ್‌ಟಿ), ಮೂಳೆ ಸಂಬಂಧಿತ ರೋಗ ತಪಾಸಣೆ ಹಾಗೂ ಸಾಮಾನ್ಯ ರೋಗಗಳ ಜತೆ ಬಿಪಿ, ಶುಗರ್ ತಪಾಸಣೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net