ಭಕ್ತರ ಇಷ್ಟಾರ್ಥ ಸಿದ್ಧಿಗೆ ಯಕ್ಷಗಾನ ಸೇವೆ : ಕಮಲಾದೇವಿ ಪ್ರಸಾದ್ ಆಸ್ರಣ್ಣ ಹೇಳಿಕೆ

ಕಟೀಲು ಮೇಳದ ಭಾಗವತ ಅಂಡಾಲ ದೇವಿಪ್ರಸಾದ ಶೆಟ್ಟಿ, ಕನ್ನಡಿಕಟ್ಟೆ ಗಣೇಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಟೀಲು ಮೇಳದ ಭಾಗವತ ಅಂಡಾಲ ದೇವಿಪ್ರಸಾದ ಶೆಟ್ಟಿ, ಕನ್ನಡಿಕಟ್ಟೆ ಗಣೇಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
Published on

ಕಿನ್ನಿಗೋಳಿ: ಕಟೀಲು ದುರ್ಗೆಗೆ ಯಕ್ಷಗಾನ ಅತ್ಯಂತ ಪ್ರಿಯವಾದ ಸೇವೆ, ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಥವಾ ಕಷ್ಟ ಪರಿಹಾರಕ್ಕಾಗಿ ಯಕ್ಷಗಾನ ಸೇವೆ ನೀಡುತ್ತಾರೆ ಎಂದು ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಹೇಳಿದರು.

ದೇವಸ್ಯ ಮತ್ತು ಕೊಡೆತ್ತೂರು ಗುತ್ತು ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊಡೆತ್ತೂರು ಗುತ್ತುವಿನಲ್ಲಿ ಕಟೀಲು ಮೇಳ ಹೊರಟು ಮೂರನೇ ದಿನದ ಯಕ್ಷಗಾನ ಸೇವೆ ಆಟದ ಸಂದರ್ಭ ಕಟೀಲು ಮೇಳದ ಭಾಗವತ ಅಂಡಾಲ ದೇವಿಪ್ರಸಾದ ಶೆಟ್ಟಿ, ಆಟ-ಕೂಟಗಳಲ್ಲಿ ಖ್ಯಾತರಾದ ಕನ್ನಡಿಕಟ್ಟೆ ಗಣೇಶ ಶೆಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಶ್ರೀಹರಿನಾರಾಯಣದಾಸ ಆಸ್ರಣ್ಣ, ವೇದವ್ಯಾಸ ಉಡುಪ, ರಘುರಾಮ ಮಾಡ, ಪೆರಾರ ಬಾಲಕೃಷ್ಣ ಶೆಟ್ಟಿ, ಸುಧಾಕರ ಸೇನವ, ನಿತಿನ್ ಕಾವ ಎಕ್ಕಾರು, ಹರಿದಾಸ ಉಡುಪ, ಭುವನಾಭಿರಾಮ ಉಡುಪ, ದೇವಸ್ಯ ಮತ್ತು ಕೊಡೆತ್ತೂರು ಗುತ್ತು ಫ್ಯಾಮಿಲಿ ಟ್ರಸ್ಟ್ ಪ್ರಮುಖರಾದ ಗುತ್ತಿನಾರ್ ನಿತಿನ್ ಶೆಟ್ಟಿ ಕೊಡೆತ್ತೂರುಗುತ್ತು, ಅರುಣ್ ಶೆಟ್ಟಿ ಕೊಡೆತ್ತೂರುಗುತ್ತು, ಕೆ.ವಿ.ಶೆಟ್ಟಿ ದೇವಸ್ಯ, ಬಿ.ಆರ್.ಶೆಟ್ಟಿ ಕೊಡೆತ್ತೂರುಗುತ್ತು, ಹರಿಶ್ಚಂದ್ರ ಆಳ್ವ ಕೊಡೆತ್ತೂರುಗುತ್ತು, ದಾಮೋದರ ಭಂಡಾರಿ ಕೆಮ್ರಾಲ್‌ಗುತ್ತು ಮುಂತಾದವರು ಇದ್ದರು. ಕೊಡೆತ್ತೂರು ದೇವಿಪ್ರಸಾದ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net