ಮಂಗಳೂರು: ಯಕ್ಷಗಾನ ಕ್ಷೇತ್ರದ ಮೇರು ಕಲಾವಿದ ಕೆ.ಗೋವಿಂದ ಭಟ್ 86 ರ ಇಳಿವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅದ್ಭುತ ಮಾತುಗಾರಿಕೆ, ವೇಷಕ್ಕೊಪ್ಪುವ ಬಣ್ಣಗಾರಿಕೆ, ಯಾವ ವೇಷವಾದರೂ ಸೈ ಅದಕ್ಕೆ ಪೂರಕವಾದ ಹಾವ ಭಾವ, ನಾಟ್ಯಾಭಿನಯ ಇವಕ್ಕೆಲ್ಲ ನ್ಯಾಯ ಒದಗಿಸಿಕೊಡುವ ಕಲಾವಿದರೆಂದೇ ಖ್ಯಾತರಾಗಿದ್ದರು.
ಬಾಲಗೋಪಾಲ ವೇಷದಿಂದ ತೊಡಗಿ 78ರ ಹಿರಿಯ ವಯಸ್ಸಿನಲ್ಲೂ ಕೌರವ, ರಕ್ತಬೀಜ, ವಾಲಿ ಇಂತಹ ಮೇರು ಪಾತ್ರಗಳಲ್ಲಿ ರಂಗಕ್ಕೆ ವೈಭವ ತಂದುಕೊಟ್ಟ ತೆಂಕುತಿಟ್ಟು ಯಕ್ಷಗಾನದ ‘ಪರಿಪೂರ್ಣ’ ಕಲಾವಿದ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಕಟ್ಟೇಹಕ್ಲು ಎಂಬಲ್ಲಿ ವಾಸವಾಗಿರುವ ಹಿರಿಯ ಪುತ್ರನ ಮನೆಯಲ್ಲಿ ಅವರು ಶುಕ್ರವಾರ ತಮ್ಮ ಕೊನೆಯುಸಿರೆಳೆದರು.