ಆರಂಭದಿಂದಲೂ, ಉಡುಪಿ ಸಿಒಇ 10ಕ್ಕೂ ಹೆಚ್ಚು ಜಿಸಿಸಿಗಳನ್ನು ಒಳಗೊಂಡಂತೆ 50ಕ್ಕೂ ಹೆಚ್ಚು ಗ್ರಾಹಕ ಸಂಸ್ಥೆ (ಕ್ಲೈಂಟ್)ಗಳಿಗೆ ಬೆಂಬಲ ನೀಡಿದ್ದು, ನೇರ ಹಾಗೂ ಒಪ್ಪಂದ ಆಧಾರಿತ ನೇಮಕಾತಿಯ ಮೂಲಕ ಐಟಿ ಮತ್ತು ಐಟಿಯೇತರ ಕ್ಷೇತ್ರಗಳಲ್ಲಿ 1,050ಕ್ಕೂ ಹೆಚ್ಚು ನಿಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಲ್ಲಿ 2024ರಲ್ಲಿ 104 ನಿಯೋಜನೆಗಳು ಹಾಗೂ 2025ರಲ್ಲಿ 951 ನಿಯೋಜನೆಗಳು ಸೇರಿವೆ. ಪ್ರಸ್ತುತ ಸಿಒಇ, ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಮುಂಬೈ ಸೇರಿದಂತೆ ಪ್ರಮುಖ ಭಾರತೀಯ ಪ್ರತಿಭಾ ಮಾರುಕಟ್ಟೆಗಳಿಗೆ ಸೇವೆ ನೀಡುತ್ತಿದ್ದು, ದುಬೈ ಸೇರಿದಂತೆ ಅಂತರರಾಷ್ಟ್ರೀಯ ಸ್ಥಳಗಳಿಗೂ ನೇಮಕಾತಿ ಆದೇಶಗಳನ್ನು ಕಾರ್ಯಗತಗೊಳಿಸುತ್ತಿದೆ.