ಮಹಿಳೆಗೆ ಮಾನಹಾನಿ ಸಾಬೀತು 1 ವರ್ಷ ಜೈಲು ಶಿಕ್ಷೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಮಹಿಳೆಯೊಬ್ಬರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿ ಮಾನಹಾನಿ ಮಾಡಿದ ಪ್ರವೀಣ್ ಅಲಿಯಾಸ್ ಸಂತೋಷ್ ಎಂಬಾತನಿಗೆ 7ನೇ ಜೆಎಂಎಫ್ ಸಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ.
ಪ್ರಕರಣ ವಿವರ: ಉಳ್ಳಾಲ ತಾಲೂಕು ಕೋಟೆಕಾರು ಗ್ರಾಮದ ಪನೀರ್ ಚರ್ಚ್ ಬಳಿ ಪ್ರವೀಣ್ ಅಲಿಯಾಸ್ ಸಂತೋಷ್ ಎಂಬಾತ ಮಹಿಳೆಯೊಬ್ಬರನ್ನು ಹಿಂಬಾಲಿಸಿಕೊಂಡು ಮಹಿಳೆಗೆ ಅವಾಚ್ಯ ಶಬ್ಧಗಳಿಂದ ಬೈದು, ಕೈ ಹಿಡಿದು ಎಳೆದು ಮಾನಹಾನಿ ಮಾಡಿದ್ದಾನೆ.
7ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಪ್ರಭಾರ ನ್ಯಾಯಾಧೀಶರಾದ ಚಿರಾಗ್ ಸಿ. ಅವರು, ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಭಿಯೋಜನೆ ಪರವಾಗಿ 9 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿದ್ದು, 6 ದಾಖಲೆಗಳನ್ನು ಗುರುತಿಸಲಾಗಿತ್ತು.
ಅಭಿಯೋಜನೆ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಇಬ್ರಾಹಿಂ ಬಾತಿಷ ಯು.ಕೆ. ಅವರು ವಾದ ಮಂಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net