

ಕಾಸರಗೋಡು: ಪಳಯಂಗಾಡಿ ಅಡುತ್ತಿಲ ಕೆಎಸ್‌ಟಿಪಿ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ ಲಾರಿ ಡಿಕ್ಕಿಯಾಗಿ ಪಳಯಂಗಾಡಿ ನಿವಾಸಿ ಕೆ.ಸುಲೋಚನಾ(52) ಎಂಬುವರು ಮೃತಪಟ್ಟಿದ್ದಾರೆ. ಅಪಘಾತದ ಬಲಿಕ ಲಾರಿ ನಿಲ್ಲಿಸದೆ ಲಾರಿಯೊಂದಿಗೆ ಪರಾರಿಯಾಗಿದ್ದ ಚಾಲಕನನ್ನು ಪರಿಯಾರಂ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಪಿ.ವಿನೋದ್ ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಮಲಪ್ಪುರಂ ವಳಕ್ಕುಳಂ ಕೋಳಿಚ್ಚೇನ ಅಕ್ಕಪರಂಬಿಲ್ ಹೌಸ್‌ನ ಕೆ.ಪ್ರವೀಣ್(35) ಬಂಧಿತ. ಪಳಯಂಗಾಡಿ ಅಡುತ್ತಿಲ ಕೆಎಸ್‌ಟಿಪಿ ರಸ್ತೆಯಲ್ಲಿ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಕೆ.ಸುಲೋಚನಾ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪಳಯಂಗಾಡಿ ಪೊಲೀಸರು ಘಟನಾ ಸ್ಥಳದಿಂದ ಕಣ್ಣೂರುವರೆಗಿನ ಸುಮಾರು 20ರಷ್ಟು ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಸುಲೋಚನಾ ಅವರಿಗೆ ಡಿಕ್ಕಿ ಹೊಡೆದ ಲಾರಿಯ ಮಾಹಿತಿ ಲಭಿಸಿತ್ತು. ಕಣ್ಣೂರಿನ ಖಾಸಗಿ ಆಸ್ಪತ್ರೆಯೊಂದರ ಹಿಂಭಾಗದಲ್ಲಿ ನಿಲ್ಲಿಸಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಚಾಲಕನನ್ನು ಬಂಧಿಸಿದ್ದಾರೆ.