ಕಾರು ಡಿಕ್ಕಿಯಾಗಿ ಮಹಿಳೆ ಗಂಭೀರ

ಮುಕ್ಕ ಆಸ್ಪತ್ರೆಗೆ ದಾಖಲು
ACCIDENT
ACCIDENT
Published on: 

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕ್ಷೀರಸಾಗರ ಸೊಸೈಟಿ ಬಳಿ ಬುಧವಾರ ಕಾರು ಡಿಕ್ಕಿಯಾಗಿ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಗೊಂಡ ಮಹಿಳೆಯನ್ನು ಮೂಲತ ಬಂಟ್ವಾಳ ನಿವಾಸಿ, ಮೂಲ್ಕಿ ಚಿತ್ರಾಪು ಕಲ್ಸಂಕ ಬಳಿ ವಾಸ್ತವ್ಯವಿರುವ ಕಮಲಾ (48) ಎಂದು ಗುರುತಿಸಲಾಗಿದೆ. ಅವರು ಮೂಲ್ಕಿ ಚರಂತಿಪೇಟೆ ಬಳಿ ಅಂಗಡಿಯಿಂದ ಕೆಲಸ ಮುಗಿಸಿ ವಾಪಸ್ ಮನೆಗೆ ಹೋಗಲು ಹೆದ್ದಾರಿ ದಾಟುತ್ತಿರುವಾಗ ಕಾರು ಡಿಕ್ಕಿಯಾಗಿದೆ.

ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಅಪಘಾತ ನಡೆದ ಕಾರಿನಲ್ಲೇ ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.