ಮನೆಯಲ್ಲಿ ಗಾಂಜಾ ದಾಸ್ತಾನು, ಮಹಿಳೆ ಸೆರೆ

ಪನತ್ತಡಿ ಪುತ್ತೂರು ಅಡುಕ್ಕತ್ತ್ ನಿವಾಸಿ
ಗಾಂಜಾ
ಗಾಂಜಾ
Published on

ಕಾಸರಗೋಡು: ಮನೆಯೊಳಗೆ ದಾಸ್ತಾನಿರಿಸಲಾಗಿದ್ದ 1.718 ಕೆ.ಜಿ ಗಾಂಜಾ ವಶಪಡಿಸಿಕೊಂಡಿರುವ ಅಬಕಾರಿ ದಳ ಸಿಬ್ಬಂದಿ ಪನತ್ತಡಿ ಪುತ್ತೂರು ಅಡುಕ್ಕತ್ತ್ ನಿವಾಸಿ ಪಿ.ಸಿ.ಮೀನಾಕ್ಷಿ (47) ಎಂಬಾಕೆಯನ್ನು ಬಂಧಿಸಿದ್ದಾರೆ. ಕಾಸರಗೋಡು ಅಬಕಾರಿ ಇಂಟೆಲಿಜೆನ್ಸ್ ಆ್ಯಂಡ್ ಇನ್ವೆಸ್ಟಿಗೇಷನ್ ಬ್ಯೂರೋಗೆ ಲಭಿಸಿದ ಖಚಿತ ಮಾಹಿತಿಯನ್ವಯ ಬುಧವಾರ ಮುಂಜಾನೆ ಅಬಕಾರಿ ತಂಡ ಮನೆಗೆ ದಾಳಿ ನಡೆಸಿದಾಗ ಮಲಗುವ ಕೊಠಡಿಯಲ್ಲಿ ಗಾಂಜಾ ಪತ್ತೆಯಾಗಿದೆ.

ನಗದು ಅಕ್ರಮ ಸಾಗಾಟ, ಆರೋಪಿ ಸೆರೆ

ಕಾಸರಗೋಡು: ಬೈಕ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 15,22,100 ರೂ. ನಗದು ವಶಪಡಿಸಿಕೊಂಡಿರುವ ಪೊಲೀಸರು, ಕಾಸರಗೋಡು ಜಿಲ್ಲೆಯ ಅಣಂಗೂರು ನಿವಾಸಿ ಬಿ.ಎಂ.ಇಬ್ರಾಹಿಂ (50) ಎಂಬಾತನನ್ನು ಬಂಧಿಸಿದ್ದಾರೆ. ಹೊಸದುರ್ಗ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ.ಶೈನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹವಾಲಾ ಹಣ ವಶಪಡಿಸಿಕೊಳ್ಳಲಾಗಿದೆ.

ಚಿನ್ನಾಭರಣ ಎಗರಿಸಿದ್ದ ಆರೋಪಿ ಸೆರೆ

ಕಾಸರಗೋಡು: ಹೊಸಂಗಡಿಯ ಸರ್ವೀಸ್ ರಸ್ತೆಯಲ್ಲಿ ಪಾದಚಾರಿ ಮಹಿಳೆಯ ಚಿನ್ನಾಭರಣ ಕಸಿದು ಪರಾರಿಯಾಗಿದ್ದ ಕುಂಬಳೆ ಬಂಬ್ರಾಣದ ಈಂದುಗುರಿ ನಿವಾಸಿ ಸುಧೀಶ್ (27)ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿ ಬಂಬ್ರಾಣದ ಸಂದೀಪ್ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು. ಜೂ.22ರಂದು ಹೊಸಂಗಡಿ ಸರ್ವೀಸ್ ರಸ್ತೆಯಲ್ಲಿ ಬೈಕಲ್ಲಿ ಆಗಮಿಸಿದ ತಂಡ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಎಗರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net