ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ : ಅಪಾರ ಪ್ರಮಾಣದ ಕೃಷಿ ಹಾನಿ

 ಕಾಡಾನೆಗಳು ಕೃಷಿ ಹಾನಿಗೊಳಿಸಿರುವುದು.
ಕಾಡಾನೆಗಳು ಕೃಷಿ ಹಾನಿಗೊಳಿಸಿರುವುದು.
Published on

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಕೊಳಂಬೆ ಪರಿಸರದಲ್ಲಿ ಬುಧವಾರ ಬೆಳಗ್ಗಿನ ಜಾವ ಕಾಡಾನೆಗಳು ಸ್ಥಳೀಯ ತೋಟಗಳಿಗೆ ದಾಳಿ ಮಾಡಿದ್ದು, ಅಪಾರ ಪ್ರಮಾಣದ ಕೃಷಿ ಹಾನಿ ಉಂಟು ಮಾಡಿವೆ.

ಇಲ್ಲಿನ ಮೇರಿ, ಭವಾನಿ, ಜೋಸೆಫ್, ಮಾಯಾ ಮೊದಲಾದವರ ತೋಟಗಳಿಗೆ ಲಗ್ಗೆಯಿಟ್ಟ ಕಾಡಾನೆ 200ಕ್ಕಿಂತ ಅಧಿಕ ಬಾಳೆಗಿಡ, 16 ತೆಂಗಿನಗಿಡ, 25ರಷ್ಟು ಅಡಕೆಗಿಡಗಳನ್ನು ನಾಶಪಡಿಸಿದೆ. ಬೆಳಗಿನ ಜಾವ ವ್ಯಕ್ತಿಯೊಬ್ಬರು ರಬ್ಬರ್ ಟ್ಯಾಪಿಂಗ್‌ಗೆ ತೆರಳುತ್ತಿದ್ದ ವೇಳೆ ತೋಟದಲ್ಲಿ ಮರಿಯಾನೆ ಸಹಿತ ಮೂರು ಆನೆಗಳನ್ನು ಹತ್ತಿರದಿಂದ ಕಂಡಿದ್ದಾರೆ. ಅವರು ತಕ್ಷಣ ಅಲ್ಲಿಂದ ಹಿಂದಿರುಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಸಂಜೆ ವೇಳೆ ಮುಂಡಾಜೆಯ ಮೃತ್ಯುಂಜಯ ನದಿ ಬದಿ ಈ ಆನೆಗಳು ಕಂಡುಬಂದಿದ್ದು, ನದಿ ಮೂಲಕವೇ ಚಾರ್ಮಾಡಿಯ ಕೊಳಂಬೆಯತ್ತ ಹೋಗಿವೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net