ಮಂಗಳೂರಿನಲ್ಲಿ ಸುಸಜ್ಜಿತ ಔಷಧ ಉಗ್ರಾಣ

  ದ.ಕ ಹಾಗೂ ಉಡುಪಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಸದ್ಯ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಔಷಧ ಉಗ್ರಾಣ ಇದೆ. ತುಂಬಾ ಹಳೆಯದಾದ ಉಗ್ರಾಣ ಆದ ಕಾರಣ ಇದು ಶಿಥಿಲಗೊಳ್ಳುವ ಸ್ಥಿತಿಯಲ್ಲಿದ್ದು, ಮಳೆಗಾಲದಲ್ಲಂತೂ ತುಂಬಾ ಸಮಸ್ಯೆ ಉಂಟಾಗುತ್ತಿದೆ.
ದ.ಕ ಹಾಗೂ ಉಡುಪಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಸದ್ಯ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಔಷಧ ಉಗ್ರಾಣ ಇದೆ. ತುಂಬಾ ಹಳೆಯದಾದ ಉಗ್ರಾಣ ಆದ ಕಾರಣ ಇದು ಶಿಥಿಲಗೊಳ್ಳುವ ಸ್ಥಿತಿಯಲ್ಲಿದ್ದು, ಮಳೆಗಾಲದಲ್ಲಂತೂ ತುಂಬಾ ಸಮಸ್ಯೆ ಉಂಟಾಗುತ್ತಿದೆ.
Published on
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಆರೋಗ್ಯ ಕೇಂದ್ರ ಹಾಗೂ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಇನ್ನು ಮುಂದೆ ಔಷಧ ಪೂರೈಕೆ ಸುಳಭ. ಈ ಔಷಧ ಸಂಗ್ರಹಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸುಸಜ್ಜಿತ ಔಷಧ ಉಗ್ರಾಣ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಂಗಳೂರಿನ ಬೋಂದೆಲ್ ಬಳಿಯ ಕೃಷ್ಣ ನಗರದಲ್ಲಿ ಸುಮಾರು 60 ಸೆಂಟ್ಸ್ ಜಾಗದಲ್ಲಿ ಉಗ್ರಾಣ ನಿರ್ಮಾಣಕ್ಕೆ ಸಿದ್ದತೆ ನಡೆಯುತ್ತಿದೆ. ಇದರ ಆರಂಭಿಕ ಹಂತದಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಮೈದಾನದ ಸುತ್ತ ಆವರಣ ಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೋಂದೆಲ್ ಬಳಿಯ ಮೈದಾನ ಜಾಗವನ್ನು 2024ರಲ್ಲಿ ಆರೋಗ್ಯ ಇಲಾಖೆಗೆ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ಇಲ್ಲಿನ ಕೃಷ್ಣನಗರ ಸಾರ್ವಜನಿಕ ಮೈದಾನ ಹೋರಾಟ ಸಮಿತಿಯ ವಿರೋಧದ ನಡುವೆಯೂ ಸದ್ಯ ಇಲ್ಲಿ ಕಾಮಗಾರಿ ಆರಂಭವಾಗಿದೆ.
*ಆರೋಗ್ಯ ಇಲಾಖೆ ಪ್ರಜಾಸೌಧಕ್ಕೆ ಶಿಫ್ಟ್
ಸದ್ಯ ಮಂಗಳೂರಿನ ಎ.ಬಿ. ಶೆಟ್ಟಿ ವೃತ್ತ ಬಳಿ ಆರೋಗ್ಯ ಇಲಾಖೆ ಕಚೇರಿ ಇದ್ದು, ಕಟ್ಟಡ ಹಳೆಯದಾಗಿದೆ. ಇಲ್ಲಿ ಇಲಾಖೆಯ ಕೆಲವೊಂದು ಕಚೇರಿಗಳಿದ್ದು, ತುಂಬಾ ಇಕ್ಕಟ್ಟಾಗಿದೆ. ಕಡತಗಳನ್ನು ಇಡಲು ಸಮರ್ಪಕ ಜಾಗ ಇಲ್ಲದ ಕಾರಣ ಹೊಸ ಕಚೇರಿಗೆ ಬೇಡಿಕೆ ಇರಿಸಲಾಗಿತ್ತು. ಬೋಂದೆಲ್‌ನಲ್ಲಿ ಉಗ್ರಾಣ ನಿರ್ಮಾಣದ ಜಾಗದಲ್ಲೇ ಆರೋಗ್ಯ ಕಚೇರಿ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ ಉಗ್ರಾಣದ ಆವಶ್ಯಕತೆ ಇರುವ ಕಾರಣ ಆರೋಗ್ಯ ಕಚೇರಿಯನ್ನು ಪಡೀಲ್‌ನಲ್ಲಿರುವ ಪ್ರಜಾಸೌಧ ಕಟ್ಟಡಕ್ಕೆ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ. ಸದ್ಯದಲ್ಲೇ ಈ ಪ್ರಕ್ರಿಯೆಯೂ ನಡೆಯುತ್ತಿದೆ.

ಎಂಎಲ್‌ಎ ವೇದವ್ಯಾಸ ಕಾಮತ್ ಮನವಿ

ದ.ಕ ಹಾಗೂ ಉಡುಪಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಸದ್ಯ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಔಷಧ ಉಗ್ರಾಣ ಇದೆ. ತುಂಬಾ ಹಳೆಯದಾದ ಉಗ್ರಾಣ ಆದ ಕಾರಣ ಇದು ಶಿಥಿಲಗೊಳ್ಳುವ ಸ್ಥಿತಿಯಲ್ಲಿದ್ದು, ಮಳೆಗಾಲದಲ್ಲಂತೂ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಈಗಾಗಲೇ ವೆನ್ಲಾಕ್ ಆಸ್ಪತ್ರೆಯು ಹಂತಹಂತವಾಗಿ ಮೇಲ್ದರ್ಜೆಗೇರುತ್ತಿದ್ದು, ಇದೇ ಉಗ್ರಾಣದಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಔಷಧ ಸಂಗ್ರಹವೂ ಮಾಡುವ ಕಾರಣ ಸ್ಥಳಾವಕಾಶ ಸಾಲುತ್ತಿಲ್ಲ. ಈ ನಿಟ್ಟಿನಲ್ಲಿ ನೂತನ ಔಷಧ ಉಗ್ರಾಣ ನಿರ್ಮಾಣಕ್ಕೆ ಸರ್ಕಾರಕ್ಕೆ ಶಾಸಕ ವೇದವ್ಯಸ ಕಾಮತ್ ಮನವಿ ಮಾಡಿದ್ದರು. ಹೊಸ ಉಗ್ರಾಣ ನಿರ್ಮಾಣದ ಬಳಿಕ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಔಷಧ ಉಗ್ರಾಣವನ್ನು ನವೀಕರಣಗೊಳಿಸಿ ಇಲ್ಲಿನ ಆಸ್ಪತ್ರೆಯ ಔಷಧ ಸಂಗ್ರಹಕ್ಕೆ ಉಪಯೋಗಿಸುವ ಸಾಧ್ಯತೆ ಇದೆ. ವೆನ್ಲಾಕ್ ಆಸ್ಪತ್ರೆಯೂ ಹಂತ ಹಂತವಾಗಿ ನವೀಕರಣಗೊಳ್ಳುತ್ತಿದ್ದು, ಈ ವೇಳೆ ಔಷಧ ಸಂಗ್ರಹಕ್ಕೆ ಪ್ರತ್ಯೇಕ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ.
"

ಕೃಷ್ಣನಗರದಲ್ಲಿ ಔಷಧ ಉಗ್ರಾಣ ನಿರ್ಮಾಣಗೊಳ್ಳುತ್ತಿರುವ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡಬೇಕು. 60 ಸೆಂಟ್ಸ್ ಜಾಗದಲ್ಲಿ 30 ವರ್ಷಗಳಿಂದ ಸ್ಥಳೀಯರು ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಆರೋಗ್ಯ ಇಲಾಖೆ ಬಳಸಿಕೊಂಡರೆ ಈ ಭಾಗದ ಸಾರ್ವಜನಿಕರ ಚಟುವಟಿಕೆಗಳಿಗೆ ಬೇರೆ ಜಾಗ ಇಲ್ಲದಂತಾಗುತ್ತದೆ.

------------------
"

ದ.ಕ., ಉಡುಪಿ ಜಿಲ್ಲೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಸುಸಜ್ಜಿತ ಔಷಧ ಉಗ್ರಾಣ ನಿರ್ಮಾಣ ಆಗುತ್ತಿದೆ. ಸದ್ಯ ವೆನ್ಲಾಕ್ ಆಸ್ಪತ್ರೆಯಲ್ಲಿ ಔಷಧ ಸಂಗ್ರಹಣೆ ಮಾಡಲಾಗುತ್ತಿದೆ. ಇದು ಶಿಥಿಲಗೊಳ್ಳುವ ಹಂತದಲ್ಲಿದ್ದು, ದಾಸ್ತಾನಿಗೆ ಸ್ಥಳಾವಕಾಶದ ಕೊರತೆ ಇದೆ. ಈ ನಿಟ್ಟಿನಲ್ಲಿ ಸರಕಾರದಿಂದ ಬೋಂದೆಲ್ ಕೃಷ್ಣನಗರ ಬಳಿ ಜಾಗ ನಿಗದಿಪಡಿಸಿದ್ದು, ಇಲ್ಲಿ ಔಷಧ ಉಗ್ರಾಣದ ಪೂರಕ ಕೆಲಸ ಆರಂಭಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net