ಪೌರ ಕಾರ್ಮಿಕರಿಂದ ನೀರಿನ ಪೈಪ್‌ಲೈನ್ ದುರಸ್ತಿ!

ಬಂಟ್ವಾಳ ಪುರಸಭಾ ವ್ಯಾಪ್ತಿಯ ಮುಖ್ಯರಸ್ತೆ ಬದಿ ಪೌರ ಕಾರ್ಮಿಕರು ಕುಡಿಯುವ ನೀರಿನ ಪೈಪ್ ದುರಸ್ತಿಗೊಳಿಸುತ್ತಿರುವುದು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಮುಖ್ಯರಸ್ತೆ ಬದಿ ಪೌರ ಕಾರ್ಮಿಕರು ಕುಡಿಯುವ ನೀರಿನ ಪೈಪ್ ದುರಸ್ತಿಗೊಳಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆಗಿಲ್ಲ ಬೆಲೆ
  • ಸ್ವಚ್ಛತಾ ಕಾರ್ಯ ಜತೆ ಇತರ ಕೆಲಸಗಳ ಹೊರೆ
ಇತ್ತೀಚೆಗೆ ಮುಖ್ಯಾಧಿಕಾರಿಯಾಗಿ ಇಲ್ಲಿಗೆ ಬಂದಿರುವ ತೀರ್ಥಪ್ರಸಾದ್, 1997ರಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ 9 ಮಂದಿ ನೌಕರರನ್ನು ನಾಲ್ಕು ದಿನಗಳ ಹಿಂದೆ ಸೇವೆಯಿಂದ ತೆರವುಗೊಳಿಸಿದ್ದರು. ಈ ಬಗ್ಗೆ ಪುರಸಭೆ ಎದುರು ನೌಕರರು ಎರಡೆರಡು ಬಾರಿ ಪ್ರತಿಭಟನೆ ನಡೆಸಿದ್ದರು. ಪುರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದರ ಜತೆಗೆ ಯಾವುದೇ ಟೆಂಡರ್ ಕರೆಯದೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕಗೊಳಿಸಿರುವುದನ್ನು ಕಾನೂನು ರೀತಿಯಲ್ಲಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net