ಮತದಾನ ಗುರುತಿನ ಚೀಟಿ ಅಭಿಯಾನ

‘ನಮ್ಮ ಮತ ನಮ್ಮ ಹಕ್ಕು’ ಮತದಾನ ಗುರುತಿನ ಚೀಟಿ ಅಭಿಯಾನ ಮೂಡುಬಿದಿರೆಯಲ್ಲಿ ನಡೆಯಿತು.
‘ನಮ್ಮ ಮತ ನಮ್ಮ ಹಕ್ಕು’ ಮತದಾನ ಗುರುತಿನ ಚೀಟಿ ಅಭಿಯಾನ ಮೂಡುಬಿದಿರೆಯಲ್ಲಿ ನಡೆಯಿತು.
Published on

ಮೂಡುಬಿದಿರೆ: ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ(ಮಂಗಳೂರು) ಮತ್ತು ಛಾಯಾ ಗ್ರಾಮ ಒನ್ ಸೇವಾ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಲಾದ ‘ನಮ್ಮ ಮತ ನಮ್ಮ ಹಕ್ಕು’ ಮತದಾನ ಗುರುತಿನ ಚೀಟಿ ಅಭಿಯಾನ ಭಾನುವಾರ ಮೂಡುಬಿದಿರೆ ಗ್ಯಾರಂಟಿ ಅಧ್ಯಕ್ಷರ ಕಚೇರಿಯಲ್ಲಿ ನಡೆಯಿತು.

ಪುರಸಭಾ ಹಿರಿಯ ಸದಸ್ಯ ಕೊರಗಪ್ಪ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಭರತ್ ಮುಂಡೋಡಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪುರಸಭಾ ಸದಸ್ಯರಾದ ಪಿ.ಕೆ.ಥಾಮಸ್, ಅಭಿನಂದನ್ ಬಳ್ಳಾಳ್, ಅಬ್ದುಲ್ ಕರೀಂ, ಜೆಸ್ಸಿ ಮೆನೇಜಸ್, ಸಂತೋಷ್ ಶೆಟ್ಟಿ, ಸುರೇಶ್ ಕೋಟ್ಯಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾತ್ಯಾಯಿನಿ, ಗ್ಯಾರಂಟಿ ಅನುಷ್ಠಾನದ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸದಸ್ಯರಾದ ಶಕುಂತಲಾ, ರಜನಿ, ಹರೀಶ್ ಆಚಾರ್ಯ, ಶೌಕತ್ ಆಲಿ, ರೆಕ್ಸಾನ್, ಪುರುಷೋತ್ತಮ್ ನಾಯಕ್, ಪ್ರಭಾಕರ್ ದರಗುಡ್ಡೆ, ಅಸ್ಲಾಂ ಪಡುಮಾರ್ನಾಡು, ರಮೇಶ್ ಶೆಟ್ಟಿ ಮಾರ್ನಾಡು ಉಪಸ್ಥಿತರಿದ್ದರು.

ಸಾರ್ವಜನಿಕರು ಹೊಸ ಮತದಾರರ ಗುರುತಿನ ಚೀಟಿ ನೋಂದಣಿ, ತಿದ್ದುಪಡಿ, ಸೇರ್ಪಡೆ ಮುಂತಾದ ಪ್ರಯೋಜನ ಪಡೆದರು. ಛಾಯಾ ಸೇವಾ ಕೇಂದ್ರದ ಪ್ರಿಯಾ ಶೆಟ್ಟಿ, ರಕ್ಷಿತಾ, ಬುಶ್ರ, ಅನುಷಾ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net