ಸಪ್ತ ಜುವೆಲ್ಸ್‌ನಲ್ಲಿ ದಸರಾ-ನವರಾತ್ರಿ ವಿಜಯೋತ್ಸವ VITTAL

ದರ ಕಡಿತ ಮಾರಾಟ | ಗ್ರಾಹಕರಿಗೆ ಆಕರ್ಷಕ ಬಹುಮಾನ ಕೊಡುಗೆ
vittal sapta
ಸಪ್ತ ಜ್ಯುವೆಲ್ಸ್‌ನಲ್ಲಿ ಸಂಗ್ರಹವಿರುವ ಹೊಸ ಶೈಲಿಯ ಆಭರಣ.
Published on: 

ವಿಟ್ಲ: ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್‌ನಲ್ಲಿರುವ ಸಪ್ತ ಜುವೆಲ್ಸ್ ನವರಾತ್ರಿ ಹಾಗೂ ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಚಿನ್ನ ಹಾಗೂ ಬೆಳ್ಳಿ ಆಭರಣ ಖರೀದಿಗೆ ವಿಶೇಷ ದರ ಕಡಿತ ಹಾಗೂ ಕೊಡುಗೆಗಳನ್ನು ಘೋಷಿಸಿದೆ. ಇದರ ಜತೆಗೆ ೨ ಸಾವಿರ ರೂ. ಮೇಲ್ಪಟ್ಟ ಖರೀದಿಗೆ ವಿಜಯವಾಣಿ ವಿಜಯೋತ್ಸವದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಹಬ್ಬದ ಕೊಡುಗೆಯಾಗಿ ಚಿನ್ನ ಮತ್ತು ಬೆಳ್ಳಿ ಆಭರಣಗಳ ವಿ.ಎ. ಮೇಲೆ ಶೇ.೫ರಿಂದ ೫೦ರವರೆಗೆ ದರ ಕಡಿತ ಇರಲಿದೆ. ಪ್ರತಿ ಪವನ್ ಚಿನ್ನಾಭರಣದ ಮೇಲೆ ೧ ಸಾವಿರದಿಂದ ೯೫೦೦ ರೂ.ವರೆಗೆ ರಿಯಾಯಿತಿ ಪಡೆಯಲು ಅವಕಾಶವಿದೆ. ಹಳೇ ಚಿನ್ನಾಭರಣಗಳನ್ನು ಹೊಸತಕ್ಕೆ ಬದಲಾಯಿಸಿಕೊಳ್ಳುವಾಗ ಪ್ರತಿ ಗ್ರಾಂಗೆ ೧೦೦ ರೂ. ಹೆಚ್ಚುವರಿ ಪಡೆಯಬಹುದಾಗಿದೆ.

ದೇಶದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು, ಗ್ರಾಹಕರ ಹೊಸ ಚಿನ್ನಾಭರಣದ ಕನಸನ್ನು ನನಸಾಗಿಸಲು ಸಪ್ತ ಪ್ರಯತ್ನಿಸುತ್ತಿದೆ. ಹೊಸ ಚಿನ್ನಾಭರಣಗಳನ್ನು ಪ್ರಚಲಿತ ೯೧೬ ಎಚ್. ಯು.ಐ.ಡಿ. ಮಾರ್ಕ್ ಆಭರಣವಾಗಿ ಪರಿವರ್ತಿಸಲು ವಿಶೇಷ ಆಫರ್ ನೀಡಲಾಗಿದೆ. ಹಳೆಯ ಚಿನ್ನಾಭರಣದ ಶುದ್ಧತೆಯನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಉಚಿತವಾಗಿ ಪರೀಕ್ಷಿಸಿಕೊಳ್ಳಬಹುದಾಗಿದೆ.

ವಿಟ್ಲ ಸಪ್ತದಲ್ಲಿ ಶಾಪಿಂಗ್ ಹಬ್ಬ

ದಸರಾ ಹಾಗೂ ದೀಪಾವಳಿ ಅಂಗವಾಗಿ ವಿಜಯವಾಣಿ ವಿಜಯೋತ್ಸವ ಕಳೆದ ೫ ವರ್ಷಗಳಿಂದ ನಡೆಯುತ್ತಿದೆ. ವಿಟ್ಲದಲ್ಲಿ ಏಕೈಕ ಮಳಿಗೆಯಾಗಿರುವ ಸಪ್ತ ಜ್ಯುವೆಲ್ಸ್‌ನಲ್ಲಿ ಗ್ರಾಹಕರಿಗೆ ವಿಜಯೋತ್ಸವದ ಪ್ರಯೋಜನ ಲಭಿಸಲಿದೆ. ಸುಮಾರು ೪೨ ದಿನಗಳ ಕಾಲ ನಡೆಯುವ ಶಾಪಿಂಗ್ ಹಬ್ಬ ನವೆಂಬರ್ ೨೨ರಂದು ಕೊನೆಗೊಳ್ಳಲಿದೆ.

೨೫೦೦ಕ್ಕೂ ಅಧಿಕ ಉಡುಗೊರೆ

ಸಪ್ತ ಜ್ಯುವೆಲ್ಸ್‌ನಲ್ಲಿ ೨ ಸಾವಿರ ರೂ. ಮೇಲ್ಪಟ್ಟ ಖರೀದಿಗೆ ಕೂಪನ್ ಲಭಿಸುತ್ತಿದೆ. ರಾಜ್ಯದಲ್ಲಿ ಬಹುಮಾನವಾಗಿ ೫ ಹ್ಯಾಚ್ ಬ್ಯಾಕ್ ಕಾರ್, ೧೦ ದ್ವಿಚಕ್ರ ವಾಹನ, ೧೦ ಎಲ್‌ಇಡಿ ಟಿವಿ (೩೨ ಇಂಚು), ೧೦ ರೆಫ್ರಿಜರೇಟರ್, ೧೦ ವಾಷಿಂಗ್ ಮಷಿನ್, ೧೨೫ ಚಿನ್ನದ ನಾಣ್ಯ(೦.೫೦ ಗ್ರಾಂ ), ೧೦ ಸೇಫ್‌ಲಾಕರ್, ೨೦ ವೆಟ್ ಗ್ರೈಂಡರ್, ೨೫೮ ಬೆಳ್ಳಿ ನಾಣ್ಯಗಳು(೧೦ ಗ್ರಾಂ), ೧೫೦ ಮಿಕ್ಸರ್, ೨೦ ಟ್ರಾಲಿ ಬ್ಯಾಗ್, ೩೫೦ ಇಲೆಕ್ಟ್ರಿಕ್ ಕೆಟಲ್, ೯೦ ಇಂಡಕ್ಷನ್ ಸ್ಟೌ, ೩೦೦ ಹಾಟ್ ಪ್ಲಾಸ್ಕ್, ೪೦೦ ಪ್ರೆಶರ್ ಕುಕ್ಕರ್, ೨೬೦ ಪೆಡಸ್ಟಲ್ ಫ್ಯಾನ್, ೪೭೦ ಕಾಪರ್ ಬಾಟಲ್ ಲಭಿಸಲಿದೆ. ರಾಜ್ಯವನ್ನು ೫ ವಲಯವಾಗಿ ವಿಂಗಡಿಸಿದ್ದು, ಇದರಲ್ಲಿ ಮಂಗಳೂರು ಒಂದಾಗಿದೆ. ಪ್ರತಿ ವಲಯಕ್ಕೂ ಬಂಪರ್ ಬಹುಮಾನವಾಗಿ ಒಂದು ಹ್ಯಾಚ್‌ಬ್ಯಾಕ್ ಕಾರು ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net