ಪೂರ್ಲಪ್ಪಾಡಿಯಲ್ಲಿ ೨೪ನೇ ವರ್ಷದ ಮೊಸರು ಕುಡಿಕೆ ಉತ್ಸವ VITTAL

ಪೂರ್ಲಪ್ಪಾಡಿ ೨೪ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ದಾಸಪ್ಪ ಪೂಜಾರಿ ಎನ್. ಮಾತನಾಡಿದರು.
ಪೂರ್ಲಪ್ಪಾಡಿ ೨೪ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ದಾಸಪ್ಪ ಪೂಜಾರಿ ಎನ್. ಮಾತನಾಡಿದರು.
Published on
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ ಸಹಯೋಗದಲ್ಲಿ ೨೪ನೇ ವರ್ಷದ ಮೊಸರು ಕುಡಿಕೆ ಉತ್ಸವವು ಪೂರ್ಲಪ್ಪಾಡಿ ಶ್ರೀವರ ವೇದಿಕೆ ಮುಂಭಾಗದಲ್ಲಿ ನಡೆಯಿತು.
ಹಿರಿಯರಾದ ಬಾಬು ಗೌಡ ಖಂಡಿಗ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ವಿಟ್ಲ ರೋಟರಿ ಕ್ಲಬ್ ವಿಟ್ಲ ಅಧ್ಯಕ್ಷ ಕ್ಯಾಪ್ಟನ್ ದಾಸಪ್ಪ ಪೂಜಾರಿ ಎನ್. ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಪನ್ಯಾಸಕರಾದ ಅಣ್ಣಪ್ಪ ಸಾಸ್ತನ, ಸವಿತಾ ತಿರುಮಲೇಶ್ವರ ಭಟ್, ಮೈತ್ರೆಯಿ ಗುರುಕುಲದ ಮಾತೃಶ್ರೀ ಚಂಪಕಾವತಿ, ಪ್ರಕಾಶ ಅಣ್ಣಡ್ಕ ನಗರ, ಜಗದೀಶ ರೈ ಪನಡ್ಕ, ವಕೀಲ ರಾಮಣ್ಣ ಗೌಡ ದೇವರಮನೆ, ರೋಹಿತ್ ರೈ ಚೆಂಬರಡ್ಕ, ಈಶ್ವರ್ ಭಟ್ ಪೂರ್ಲಪ್ಪಾಡಿ, ನಾಗೇಶ್ ಪೂಜಾರಿ ಪೂರ್ಲಪ್ಪಾಡಿ, ಕಿರಣ್ ಚಂದ್ರ ಆಳ್ವ ಭಾಗವಹಿಸಿದ್ದರು.
ಮಾಲವಿ ಯತೀಶ್ ಪ್ರಾರ್ಥಿಸಿದರು. ಜಯಂತ್ ಸ್ವಾಗತಿಸಿದರು. ಜಯಂತ್ ವರದಿ ಮಂಡಿಸಿದರು. ಹರೀಶ್ ವಿಟ್ಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net