ವಿಟ್ಲಕ್ಕೆ ೨೧೪.೪೦ ಕೋ. ರೂ. ಅನುದಾನ VITTAL

ಶಾಸಕ ಅಶೋಕ್ ರೈ ಮಾಹಿತಿ | ಕಲ್ಲಕಟ್ಟದಲ್ಲಿ ಸೇತುವೆಗೆ ಗುದ್ದಲಿ ಪೂಜೆ
vittal mla
ಕಬಕ-ವಿಟ್ಲ ರಸ್ತೆಯ ಚಂದಳಿಕೆ ಕಲ್ಲಕಟ್ಟದಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕ ಅಶೋಕ್ ಕುಮಾರ್ ರೈ ಗುದ್ದಲಿ ಪೂಜೆ ನಡೆಸಿದರು. ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಅಕ್ರಮ-ಸಕ್ರಮ ಸಮಿತಿಯ ಸದಸ್ಯ ರಾಮಣ್ಣ ಪಿಲಿಂಜ ಮತ್ತಿತರರಿದ್ದರು.
Published on: 

ವಿಟ್ಲ: ಕಬಕ-ವಿಟ್ಲ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ೨೦ ಕೋಟಿ ರೂ. ಇಡಲಾಗಿದ್ದು, ಸುಮಾರು ೪.೫ ಕಿ.ಮೀ ಕಾಂಕ್ರೀಟೀಕರಣವಾಗಬಹುದು. ಎರಡೂ ಕಡೆ ಸೇತುವೆ ನಿರ್ಮಾಣಕ್ಕೂ ಅನುದಾನ ಇಡಲಾಗಿದೆ. ವಿಟ್ಲ ಭಾಗದಲ್ಲಿ ೬.೨೫ ಕೋಟಿಯಲ್ಲಿ ೧೧ ಕಾಮಗಾರಿಯ ಶಿಲಾನ್ಯಾಸ ನಡೆಯಲಿದೆ. ಶಾಸಕನಾದ ಬಳಿಕ ವಿಟ್ಲ ಭಾಗಕ್ಕೆ ೨೧೪.೪೦ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಕಬಕ ವಿಟ್ಲ ರಸ್ತೆಯ ಚಂದಳಿಕೆ ಕಲ್ಲಕಟ್ಟದಲ್ಲಿ ಸುಮಾರು ೫.೩೦ ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ವಿಟ್ಲದವರು ರಸ್ತೆ ಅಭಿವೃದ್ಧಿಯಾಗಬೇಕೆಂದು ಬೇಡಿಕೆ ಇಡದಿದ್ದರೂ ಬೆಂಚ್‌ಮಾರ್ಕ್ ಆಗಿ ಚತುಷ್ಪಥ ರಸ್ತೆ ಕಾಮಗಾರಿಯ ಪೂರ್ವಭಾವಿಯಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸಚಿವರು ಬಂದಾಗ ಪರಿಶೀಲಿಸಿದ ಮಾಣಿಲ-ಕೇರಳ ಸಂಪರ್ಕ ಸೇತುವೆಗೆ ಕೆಲವೇ ದಿನದಲ್ಲಿ ಶಿಲಾನ್ಯಾಸ ನಡೆಸಲಾಗುವುದು. ವಿಟ್ಲದಲ್ಲಿ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುವುದಕ್ಕೆ ಶಾಶ್ವತ ಪರಿಹಾರ ನೀಡಿದ್ದು, ಮುಂದಿನ ೪೦ ವರ್ಷಕ್ಕೆ ಬೇಕಾದ ರೀತಿಯಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ವ್ಯವಸ್ಥೆಯಾಗಲಿದೆ. ಉದ್ಯೋಗ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಜನರ ಕಷ್ಟಗಳಿಗೆ ಸ್ಪಂದಿಸಲಾಗಿದೆ ಎಂದರು.

ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಅಕ್ರಮ-ಸಕ್ರಮ ಸಮಿತಿಯ ಸದಸ್ಯ ರಾಮಣ್ಣ ಪಿಲಿಂಜ, ಪಟ್ಟಣ ಪಂಚಾಯಿತಿಯ ಸದಸ್ಯರಾದ ವಿ.ಕೆ.ಎಂ.ಅಶ್ರಫ್, ಪದ್ಮಿನಿ ಸೇರಾಜೆ, ಅಬ್ದುಲ್ ರಹಿಮಾನ್ ನೆಲ್ಲಿಕಟ್ಟೆ, ವಕ್ತಾರ ರಮಾನಾಥ ವಿಟ್ಲ, ಪ್ರಮುಖರಾದ ಭವಾನಿ ರೈ ಕೊಲ್ಯ, ಶ್ರೀನಿವಾಸ ಶೆಟ್ಟಿ ಕೊಲ್ಯ, ಮಹಾಲಿಂಗ ನಾಯ್ಕ, ಲೊಕೋಪಯೋಗಿ ಇಂಜಿನಿಯರ್ ರಶೀದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net