ಹಮೀದ್ ಪೇಟೆಗೆ ತೆರಳಿದ್ದ ಸಂದರ್ಭ ಅವರ ಪತ್ನಿ ಖೈರುನ್ನಿಸಾ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಖೈರುನ್ನಿಸಾ ಬೊಬ್ಬೆ ಹೊಡೆದಿದ್ದನ್ನು ಕೇಳಿಸಿಕೊಂಡ ನೆರೆಮನೆಯ ಉಮ್ಮರ್ ಎಂಬುವರು ತೋಟದಿಂದ ಓಡಿ ಬಂದು ಮನೆಯೊಳಗಿದ್ದ ಖೈರುನ್ನಿಸಾ, ಹಮೀದ್ ಅವರ ತಾಯಿ ಹಾಗೂ ೯ ವರ್ಷದ ಬಾಲಕನನ್ನು ಅಂಗಳಕ್ಕೆ ಕರೆದೊಯ್ದಿದ್ದಾರೆ.