ಸಂತೋಷ್ ಕುಮಾರ್ ಕೊಡಂಗೆ ಮಾಲೀಕತ್ವದ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ನಿಯಂತ್ರಣಕ್ಕೆ ಬಾರದ ಸ್ಥಿತಿ ತಲುಪಿತು. ಬೆಂಕಿ ವ್ಯಾಪಿಸಿ ಹೋಟೆಲ್ ಹಾಗೂ ವೈನ್‌ಶಾಪ್‌ಗೂ ಹಬ್ಬಿತು. ಇದರ ನಡುವೆ ಇದ್ದ ಟೈಲರಿಂಗ್ ಶಾಪ್, -ಸ್ಟ್‌ಫುಡ್ ಅಂಗಡಿ ಸಹಿತ ಸಣ್ಣ ಅಂಗಡಿಗಳೂ ಬೆಂಕಿಗೆ ಆಹುತಿಯಾಗಿವೆ. ಬಂಟ್ವಾಳದಿಂದ ಅಗ್ನಿಶಾಮಕವಾಹನ ಬಂದಿದ್ದು, ಬೆಂಕಿ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿರುವ ಹಿನ್ನೆಲೆಯಲ್ಲಿ ವಿಟ್ಲ ಪೇಟೆಯಲ್ಲಿ ವಿದ್ಯುತ್ ನಿಲುಗಡೆ ಮಾಡಲಾಯಿತು. ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ.