೯೨.೮೧ ಲಕ್ಷ ರೂ. ಉಳಿಕೆ ಬಜೆಟ್ Vittal

ವಿಟ್ಲ ಪಟ್ಟಣ ಪಂಚಾಯಿತಿಯ ೨೦೦೬-೨೭ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಮಂಡಿಸಿದರು. ಉಪಾಧ್ಯಕ್ಷ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಧಿಕಾರಿ ಕರುಣಾಕರ ಉಪಸ್ಥಿತರಿದ್ದರು.
ವಿಟ್ಲ ಪಟ್ಟಣ ಪಂಚಾಯಿತಿಯ ೨೦೦೬-೨೭ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಮಂಡಿಸಿದರು. ಉಪಾಧ್ಯಕ್ಷ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಧಿಕಾರಿ ಕರುಣಾಕರ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಟ್ಲ ಪಪಂ ಆಯವ್ಯಯ ಮಂಡನೆ
  • ವಿವಿಧ ಮೂಲಗಳಿಂದ ಆದಾಯ ಕ್ರೋಡೀಕರಣ ನಿರೀಕ್ಷೆ
ವಿಟ್ಲ: ಪಟ್ಟಣ ಪಂಚಾಯಿತಿಗೆ ರಾಜಸ್ವ ಆದಾಯ ೨.೯೨ ಕೋಟಿ ರೂ. ಮತ್ತು ವಿವಿಧ ನಿಽಗಳ ಅನುದಾನದ ಮೂಲಕ ೨.೨೦ ಕೋಟಿ ರೂ. ಸೇರಿ ೫.೧೩ ಕೋಟಿ ರೂ. ರಾಜಸ್ವ ಕಂದಾಯವನ್ನು ನಿರೀಕ್ಷಿಸಲಾಗಿದೆ. ಆರಂಭಿಕ ಶುಲ್ಕ ಸೇರಿ ೧೦,೧೫,೫೧,೮೪೮ ರೂ. ಒಟ್ಟು ಮೊತ್ತದಲ್ಲಿ ೯,೨೨,೭೦,೧೪೪ ರೂಪಾಯಿಯನ್ನು ೨೦೨೬-೨೭ ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಹಾಗೂ ಅಗತ್ಯಗಳಿಗೆ ಹಂಚಿಕೆ ಮಾಡಲಾಗಿದೆ. ೯೨,೮೧, ೭೦೪ ರೂ. ಉಳಿಕೆಯಾಗಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಹೇಳಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ೨೦೦೬-೨೭ನೇ ಸಾಲಿನ ಆಯವ್ಯಯ ಸಭೆಯ ಅಧ್ಯಕ್ಷತೆ ವಹಿಸಿ, ಬಜೆಟ್ ಮಂಡಿಸಿದರು.
ಆದಾಯ ಕ್ರೋಡೀಕರಣ ಮೂಲಗಳು:
ಆಸ್ತಿ ತೆರಿಗೆಯಲ್ಲಿ ೯೮.೮೮ ಲಕ್ಷ ರೂ., ಕಟ್ಟಡ ಪರವಾನಗಿಯಲ್ಲಿ ೮ ಲಕ್ಷ ರೂ., ಉದ್ಯಮ ಪರವಾನಗಿ ೧೧ ಲಕ್ಷ ರೂ., ಅಭಿವೃದ್ಧಿ ಶುಲ್ಕ ೧೩.೫೦ ಲಕ್ಷ ರೂ., ಘನತ್ಯಾಜ್ಯ ನಿರ್ವಹಣೆಯಲ್ಲಿ ೨೫ ಲಕ್ಷ ರೂ., ವಾಣಿಜ್ಯ ಸಂಕೀರ್ಣದ ಬಾಡಿಗೆ ೧೩.೫೦ ಲಕ್ಷ ರೂ., ಮಾರುಕಟ್ಟೆ ಮತ್ತು ನೆಲಬಾಡಿಗೆ ೫.೫೦ ಲಕ್ಷ ರೂ., ಖಾತೆಗಳ ಮೂಲಕ ೩.೫೦ ಲಕ್ಷ ರೂ., ಆಸ್ತಿ ತೆರಿಗೆ ದಂಡದಲ್ಲಿ ೩.೫೦ ಲಕ್ಷ ರೂ., ಜಾಹೀರಾತು ಶುಲ್ಕ ೧.೧೦ ಲಕ್ಷ ರೂ., ಮುದ್ರಾಂಕ ಶುಲ್ಕ ೨ ಲಕ್ಷ ರೂ., ನೀರಿನ ಶುಲ್ಕ ೨೬.೫೦ ಲಕ್ಷ ರೂ. ಸಂಗ್ರಹದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಸಂಗೀತ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಧಿಕಾರಿ ಕರುಣಾಕರ ಉಪಸ್ಥಿತರಿದ್ದರು. ಬೆರಳೆಣಿಕೆ ಸದಸ್ಯರು ಬಜೆಟ್ ಸಭೆಗೆ ಗೈರಾಗಿದ್ದರು.

ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ

ಪಟ್ಟಣ ಪಂಚಾಯಿತಿಯಲ್ಲಿ ನಿತ್ಯ ಉತ್ಪತ್ತಿಯಾಗುತ್ತಿರುವ ಘನ ತ್ಯಾಜ್ಯ ನಿರ್ವಹಣೆಗೆ ಎಂಆರ್‌ಎಫ್ ಘಟಕ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಸುಮಾರು ೩೦ ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಘಟಕಕ್ಕೆ ಬೇಕಾದ ಸಿಬ್ಬಂದಿ ನೇಮಕಾತಿಗೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಸ್ಯಾನಿಟರಿ ಸೂಪರ್‌ವೈಸರ್ ೨, ಲೋಡರ್ಸ್ ೩, ವಾಚ್‌ಮನ್ ಇಬ್ಬರು ಸೇರಿ ಹೊರಗುತ್ತಿಗೆ ಸಿಬ್ಬಂದಿ ವೇತನಕ್ಕೆ ಬೇಕಾದ ಅನುದಾನವನ್ನು ತೆಗೆದಿರಿಸಲಾಗಿದೆ.

ನೀರಿಗೆ ರೇಷನಿಂಗ್

ಮಳೆ ಬಾರದ ಕಾರಣ ನೀರಿಗೆ ಸಮಸ್ಯೆಯಾಗುತ್ತಿದ್ದು ರೇಷನಿಂಗ್ ಪ್ರಾರಂಭ ಮಾಡಲಾಗುವುದು. ಕೆಲವು ಕಡೆ ನೀರಿನ ಲಭ್ಯತೆಯ ಆಧಾರದಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಾಽಕಾರಿ ಕರುಣಾಕರ ಹೇಳಿದರು.

ಸಂಚಾರ ನಿಯಂತ್ರಣಕ್ಕೆ ಸಹಕಾರವಿಲ್ಲ!

ಮುಖ್ಯರಸ್ತೆಯಲ್ಲಿ ಬಸ್‌ಗಳು ನಿಂತು ನಿಂತು ಹೋಗುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಟ್ರಾಫಿಕ್ ವಿಚಾರದಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರು ನಾಲ್ಕು ಮಾರ್ಗ ಹಾಗೂ ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ನಿಲ್ಲಬೇಕು ಎಂದು ಸದಸ್ಯರು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳೇ ಬಂದು ಕೂರಲಿ!

ಸಂತೆ ಏಲಂ ಅನ್ನು ನಮಗೆ ಬೇಕಾದ ಹಾಗೆ ಮಾಡಲು ಅವಕಾಶವಿಲ್ಲ ಎಂದು ಜಿಲ್ಲಾಽಕಾರಿಗಳ ಸಭೆಯಲ್ಲಿ ಉತ್ತರ ಲಭಿಸಿದೆ. ಎಲ್ಲವನ್ನೂ ಜಿಲ್ಲಾಽಕಾರಿಗಳಲ್ಲಿ ಕೇಳಿ ಮಾಡುವುದಾದರೆ ಅವರೇ ಇಲ್ಲಿ ಬಂದು ಕೂರಲಿ. ಶೌಚಗೃಹ ಟೆಂಡರ್ ಪ್ರಕ್ರಿಯೆಗೆ ಯಾರೂ ಭಾಗವಹಿಸಿಲ್ಲ ಎಂಬ ಕಾರಣಕ್ಕೆ ಮೊದಲಿನ ಟೆಂಡರ್ ಮೊತ್ತಕ್ಕಿಂತ ಕಡಿಮೆಯಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಸದಸ್ಯರು ಆರೋಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net