

ಮಧ್ವ ಪರಂಪರೆ ಧಾರ್ಮಿಕ ಅಭಿವೃದ್ಧಿಗೆ ಶ್ರೇಷ್ಠ ಪ್ರೇರಣೆ ನೀಡಿದೆ. ಆಧುನಿಕ ಭಾರತದಲ್ಲಿ ಧರ್ಮ ರಕ್ಷಣೆಗಾಗಿ ಧಾರ್ಮಿಕ ಕಾರ್ಯ ಮಾಡಬೇಕಾದುದು ಅಗತ್ಯ. ಭಾರತೀಯ ಪರಂಪರೆ ವಿಶ್ವಕ್ಕೆ ಮಾದರಿ. ಅದನ್ನು ಸರ್ವರೂ ಅನುಸರಿಸಬೇಕು. ಧಾರ್ಮಿಕ, ಆಧ್ಯಾತ್ಮಿಕವಾದ ಒಳ್ಳೆಯ ಸಮಾಜ ಭಾರತದಲ್ಲಿದೆ. ಆರ್ಥಿಕ ಸದೃಢತೆಯ ಸಮಾನ ಸಮಾಜ ನಿರ್ಮಾಣ ಮಾಡಬೇಕಾದುದು ಅವಶ್ಯ. ಧಾರ್ಮಿಕ ಭಾವನೆ ಪುರುಜ್ಜೀವನವಾಗುತ್ತಿದೆ ಎನ್ನುವುದು ಸಂತಸದ ವಿಚಾರ.