ಬೆಳ್ತಂಗಡಿ: ನಾವೂರ ಶ್ರೀ ಗೊಪಾಲಕೃಷ್ಣ ದೇವಸ್ಥಾನದಲ್ಲಿ ಹತ್ತು ವರ್ಷಗಳಿಂದ ಧನುರ್ಮಾಸ ಮತ್ತು ಇತರ ದಿನಗಳಲ್ಲಿ ಸಾವಿರಾರು ಮಂದಿಯಿಂದ ವಿಷ್ಣು ಸಹಸ್ರನಾಮ ಪಠಣ ಅಗುತ್ತಿದೆ ಎಂದರೆ ಈ ದೇವಸ್ಥಾನ ದೇಶಕ್ಕೆ ಮಾದರಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬುಧವಾರ ನಾವೂರು ಶ್ರೀ ಗೊಪಾಲಕೃಷ್ಣ ದೇವಸ್ಥಾನದಲ್ಲಿ ದಶಮಾನೋತ್ಸವ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ವಿಭಾಗ ಮುಖ್ಯಸ್ಥ ಪೂರಣ್ ವರ್ಮ, ಉಜಿರೆ ರಬ್ಬರ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಕುಮಾರ್, ಶ್ರೀ ಗುರುದೇವ ಬ್ಯಾಂಕ್ ನಿರ್ದೇಶಕಿ ತನುಜಾ ಶೇಖರ್, ಮಿತ್ತಬಾಗಿಲು ಗ್ರಾಪಂ ಅಧ್ಯಕ್ಷ ವಿನಯಚಂದ್ರ ಸೇನೆರೆಬೆಟ್ಟು, ಪತ್ರಕರ್ತರಾದ ಬಿ.ಎಸ್.ಕುಲಾಲ್, ಮನೋಹರ್ ಬಳಂಜ, ಚೈತ್ರೆಶ್ ಇಳಂತಿಳ, ದಾಮೋದರ್ ದೊಂಡೋಲೆ, ತಾಪಂ ಸಂಯೋಜಕ ರಾಜೀವ್ ಸಾಲ್ಯಾನ್, ಶಿಕ್ಷಕರಾದ ಜಗನ್ನಾಥ್, ರಾಜೇಂದ್ರ ಭಟ್, ಕರ್ಣಾಟಕ ಬ್ಯಾಂಕ್ ಮ್ಯಾನೇಜರ್ ವೆಂಕಟರಮಣ ಮಯ್ಯ, ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಪ್ರದೀಪ್ ನಾವರ, ಟ್ರಸ್ಟಿಗಳಾದ ಹರೀಶ್, ಉಮೇಶ್ ಪೂಜಾರಿ, ಮಿತ್ತಬಾಗಿಲು ಪಿಡಿಒ ಮೋಹನ್ ಬಂಗೇರ, ಪ್ರಮುಖರಾದ ಡಾ.ಶಶಿಧರ ಡೋಂಗ್ರೆ, ಡಾ.ಸುಷ್ಮಾ ಡೋಂಗ್ರೆ, ವಸಂತ ಶೆಟ್ಟಿ ಉಪಸ್ಥಿತರಿದ್ದರು.