ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ, ಹೊನಲು ಬೆಳಕಿನ ವಿಜಯ- ವಿಕ್ರಮ ಜೋಡುಕರೆ ಕಂಬಳವನ್ನು ಈ ಬಾರಿ ಹಿಂದಿಗಿಂತಲೂ ಅದ್ದೂರಿಯಾಗಿ ನಡೆಸಬೇಕು. ಇನ್ನು ಎರಡು ವರ್ಷಗಳ ಕಾಲವಷ್ಟೇ ಇಲ್ಲಿ ಕಂಬಳ ನಡೆಸಬಹುದು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯ ಬಳಿ ನದಿಗೆ ಅಣೆಕಟ್ಟು ಮಂಜೂರಾದರೆ ನದಿಯ ಹಿನ್ನೀರಿನಿಂದ ಇಲ್ಲಿ ಕಂಬಳ ನಡೆಸಲು ಅಸಾಧ್ಯ. ಹಿರೇಬಂಡಾಡಿಯಲ್ಲಿ ಜಾಗವಿದ್ದರೂ ಅದು ಕಂಬಳ ನಡೆಸಲು ಸಮರ್ಪಕವಾಗಿಲ್ಲ. ಆದ್ದರಿಂದ ಕಂಬಳ ಆಯೋಜನೆ ಮಾಡಲು ಈ ಭಾಗದಲ್ಲಿ ಜಾಗ ಹುಡುಕಬೇಕಾಗಿದೆ ಎಂದರು.